HEALTH TIPS

ಬಹುಭಾಷಾ ವೈವಿಧ್ಯತೆ ಗಡಿನಾಡಿನ ಶ್ರೇಷ್ಠತೆ-ಯತೀಶ್ ಕುಮಾರ್ ರೈ-ಪ್ರತಿಭೆಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅಭಿಮತ

 
      ಮುಳ್ಳೇರಿಯ: ಅವಕಾಶಗಳನ್ನು ಸದುಪಯೋಗಪಡಿಸಿದಲ್ಲಿ ವ್ಯಕ್ತಿಯ ಯಶಸ್ಸು ಸಾಧ್ಯವಾಗುತ್ತದೆ. ಮಕ್ಕಳ, ಹೊಸ ತಲೆಮಾರಿನ ಪ್ರತಿಭೆಯ ಅನಾವರಣಕ್ಕೆ ಇಂದು ಸಾಕಷ್ಟು ಅವಕಾಶಗಳು ಲಭ್ಯವಿದ್ದು, ಗುರುತಿಸಿ ಪ್ರೋತ್ಸಾಹಿಸುವ ಸುಮಸ್ಸು ಸಮಾಜದ ಕರ್ತವ್ಯವಾಗಿದೆ ಎಂದು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
      ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಆದಿ ಚುಂಚನಗಿರಿ ಮಹಾಸಂಸ್ಥಾನದ ಆಶ್ರಯದಲ್ಲಿ ಹಾಸನದ ಕೇಂದ್ರ ಮೈದಾನದಲ್ಲಿ ನ.29 ಮತ್ತು 30 ರಂದು ನಡೆದ ಅಖಿಲ ಭಾರತ ಕನ್ನಡ ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ.ಕಾಸರಗೋಡು ಇದರ ಸಾರಥ್ಯದಲ್ಲಿ ಪಾಲ್ಗೊಂಡು ಕವಿಗೋಷ್ಠಿ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ಜಿಲ್ಲೆಯ ಬಾಲ ಪ್ರತಿಭೆಗಳಿಗೆ ಮುಳ್ಳೇರಿಯದ ಗಾಡಿಗುಡ್ಡೆ ರಸ್ತೆಯಲ್ಲಿರುವ ಶ್ರೀಶಾಸ್ತಾ ನಿಲಯ ನೆಲ್ಲಿಕ್ಕಳೆಯದಲ್ಲಿ ಭಾನುವಾರ ಅಪರಾಹ್ನ ಆಯೋಜಿಸಲಾದ ಗಡಿನಾಡ ಅಭಿನಂದನಾ ಸಮಾರಂಭ ಮತ್ತು ಯುವ ಕವಿಗೋಷ್ಠಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
     ಗಡಿನಾಡಿನ ಸಂಸ್ಕøತಿ, ಭಾಷೆ, ವೈವಿಧ್ಯಮಯ ಕ್ಷೇತ್ರಗಳಲ್ಲಿ ಮಿಂಚುವ ಸಾಧಕರ ಹುಟ್ಟಿಗೆ ಇಲ್ಲಿಯ ಬಹುಭಾಷಾ ವಿಶಿಷ್ಟತೆ ಕಾರಣವಾಗಿದೆ. ಹಳೆಬೇರು-ಹೊಸ ಚಿಗುರು ಎಂಬ ಕವಿವಾಣಿಯಂತೆ ಹಿರಿಯರ ಮಾರ್ಗದರ್ಶನ, ಪ್ರೋತ್ಸಾಹದ ಫಲವಾಗಿ ಇಲ್ಲಿಯ ಯುವ ಪ್ರತಿಭೆಗಳು ಇನ್ನಷ್ಟು ಪ್ರತಿಭಾವಂತಿಕೆಯಿಂದ ಲೋಕಮುಖದಲ್ಲಿ ಮಿಂಚುಲು ತೆರೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಭಾಷೆಯ ಉಳಿಯುವಿಕೆ, ಬೆಳವಣಿಗೆಯ ಹಿಂದೆ ಸಾಹಿತ್ಯ, ಸಾಂಸ್ಕøತಿಕತೆಗಳ ಅಪರಿಮಿತಕೊಡುಗೆಗಳು ತನ್ನದೇ ಪ್ರಭಾವ ಬೀರಿದ್ದು, ಅದನ್ನು ಮುಂದಿನ ತಲೆಮಾರಿಗೆ ದಾಟಿಸುವಲ್ಲಿ ಕವಿ ಹೃದಯದ ಕವಿಮಿತ್ರರು ಸಂಘಟನೆ ಹಮ್ಮಿಕೊಳ್ಳುತ್ತಿರುವ ಬುಮುಖ ಆಯಾಮದ ಚಟುವಟಿಕೆಗಳು ಸ್ತುತ್ಯರ್ಹ ಎಂದು ಶ್ಲಾಘಿಸಿದರು.
    ಕಾರ್ಟೂನ್ ಕಾಸರಗೋಡು ಅಧ್ಯಕ್ಷ, ಖ್ಯಾತ ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ, ಕಲಾ ಪ್ರಕಾರಗಳ ಉನ್ನತಿಯು ನಿರಂತರತೆಯಿಂದ ಮಾತ್ರ ಉಳಿದು ಬೆಳೆಯಬಲ್ಲದು. ಪ್ರತಿಯೊಬ್ಬನಲ್ಲೂ ಅಡಗಿರುವ ಕಲಾವಂತಿಕೆ, ಕವಿತ್ವಗಳಿಗೆ ನೀರೆರೆದು ಪರಿಪೋಶಿಸುವ, ಪ್ರೇರಣೆ ನೀಡುವ ಹೊಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ತಿಳಿಸಿದರು.
     ಪೆರ್ಲ ಸ.ನಾ.ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಎನ್. ಅವರು ಉಪಸ್ಥಿತರಿದ್ದು ಮಾತನಾಡಿ, ಚಿಗುರೊಡೆಯುವ ಪ್ರತಿಭೆಗಳ ಪ್ರೇರಕ ಶಕ್ತಿಯಾಗಿ ಮಕ್ಕಳ ಹೆತ್ತವರು, ಸಮಾಜ-ಸಂಘಟನೆಗಳು ಪ್ರವರ್ತಿಸಬೇಕು. ವ್ಯಕ್ತಿತ್ವ ಅರಳದೆ ವ್ಯಕ್ತಿ ಅರಳಲಾರ. ಸಾಹಿತ್ಯ, ಕಲೆಗಳಿಗೆ ವ್ಯಕ್ತಿ, ವ್ಯಕ್ತಿತ್ವವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಅಡಗಿದೆ ಎಂದು ತಿಳಿಸಿದರು.ಕಾಞÂಂಗಾಡ್ ವಲಯ ಟ್ರಾಫಿಕ್ ನಿಯಂತ್ರಣ ಸಬ್ ಇನ್ಸ್‍ಫೆಕ್ಟರ್ ಪರಮೇಶ್ವರ ನಾಯ್ಕ್ ಅಭಿನಂದಿಸಿ ಮಾತನಾಡಿ ಬಾಲಪ್ರತಿಭೆಗಳ ಸಾಧನೆ ನಿತ್ಯನಿರಂತರವಾಗಿರಲಿ ಎಂದು ಹಾರೈಸಿದರು. ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಶಾಲಾ ಮುಖ್ಯೋಪಾಧ್ಯಾಯ ಸುಧೀರ್ ಕುಮಾರ್ ರೈ ಉಪಸ್ಥಿತರಿದ್ದು ಮಾತನಾಡಿದರು.
    ವೇದಿಕೆಯ ನಿರ್ದೇಶಕ, ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅವರು ಬಾಲಪ್ರತಿಭೆಗಳನ್ನು ವಿಶೇಷವಾಗಿ ಅಭಿನಂದಿಸಿ ಮಾತನಾಡಿ, ಪ್ರತಿಯೊಬ್ಬನ ಅಂತರಂಗದಲ್ಲೂ ಅಮೃತವಿದೆ. ಅದನ್ನು ಮಥಿಸಿದಾಗ ಫಲನೀಡುತ್ತದೆ. ಹೃದಯವೆನ್ನುವುದು ಅಪರಿಮಿತ ಶಕ್ತಿಯ ಕಣಜವಾಗಿದ್ದು, ಬದಲಾಗುವ ಪರಿಸರ-ಅನುಭವಗಳ ಪ್ರಕ್ರಿಯೆಗಳಿಗೆ ಸ್ಪಂಧಿಸಿ ಮಾನವಂತಿಕೆಗಳಿಸುತ್ತದೆ. ಸಾಹಿತಿ, ಕಲಾವಿದರು ಸುಮನಸ್ಸಿನವರಾದಾಗ ಗೊಂದಲಗಳಿಲ್ಲದ ಸಾಧಕನಾಗಿ ಸಮಾಜದ ಆಸ್ತಿಯಾಗುತ್ತಾನೆ ಎಂದು ತಿಳಿಸಿದರು. ಸಾಹಿತ್ಯ ಧ್ಯಾನದ ಸ್ಥಿತಿಯಾಗಿದ್ದು, ನಿರಂತರ ಅಧ್ಯಯನ, ಸಂವಹನ ನೈಪುಣ್ಯತೆಯಿಂದ ರೂಪುಗೊಳ್ಳುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.
     ಸಮಾರಂಭದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸೃಷ್ಠಿ ಕೆ.ಶೆಟ್ಟಿ ಕಾಟುಕುಕ್ಕೆ, ನಿರೂಪಕರಾಗಿ ಹಾಗೂ ನಾಟಕ ಅಭಿನಯದ ಮೂಲಕ ಜನಮೆಚ್ಚುಗೆ ಪಡೆದ ಅನೂಪ್ ರಮಣ ಶರ್ಮ ಮುಳ್ಳೇರಿಯ, ಕವಿಗೋಷ್ಠಿಯಲ್ಲಿ ಕವನಗಳನ್ನು ವಾಚಿಸಿದ ಸೌಪರ್ಣಿಕಾ ಕೆ, ಪ್ರಿಯಾ ಎಸ್.ಸಾಯ, ಪೃಥ್ವಿ ಕೆ.ಶೆಟ್ಟಿ, ನವನೀತ ನಾಯ್ಕ ಬಿ., ಅಭಿ ಪೆರ್ಲ, ಹಾಗೂ ಯಕ್ಷ ಪ್ರತಿಭೆ ಸುಪ್ರೀತ ಸುಧೀರ್ ರೈ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ವೇದಿಕೆಯ ಸಹ ಸಂಚಾಲಕರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
    ಬಳಿಕ ನಡೆದ ಕವಿಗೋಷ್ಠಿಯಲ್ಲಿ ಸೃಷ್ಠಿ ಕೆ.ಶೆಟ್ಟಿ ಕಾಟುಕುಕ್ಕೆ, ಸೌಪರ್ಣಿಕಾ ಕೆ, ಪ್ರಿಯಾ ಎಸ್.ಸಾಯ, ಪೃಥ್ವಿ ಕೆ.ಶೆಟ್ಟಿ, ನವನೀತ ನಾಯ್ಕ ಬಿ., ನಿರ್ಮಲಾ ಸೇಸಪ್ಪ ಖಂಡಿಗೆ, ಚೇತನಾ ಕುಂಬಳೆ, ಆನಂದ ರೈ ಅಡ್ಕಸ್ಥಳ, ಶ್ವೇತಾ ಕಜೆ, ವಿಜಯರಾಜ ಪುಣಿಚಿತ್ತಾಯ, ರಿತೇಶ್ ಕಿರಣ್ ಕಾಟುಕುಕ್ಕೆ ಸ್ವರಚಿತ ಕವನಗಳನ್ನು ಹಾಗೂ ಅನೂಪ್ ರಮಣ ಶರ್ಮ ಅಭಿನಯ ಚತುರತೆಯನ್ನು ಪ್ರದರ್ಶಿಸಿದರು. ಪದ್ಮಾ ಟೀಚರ್ ಸಹಕರಿಸಿದರು. ವೇದಿಕೆಯ ಸಂಚಾಲಕ ಪುರುಷೋತ್ತಮ ಭಟ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಆನಂದ ರೈ ಅಡ್ಕಸ್ಥಳ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries