ನವದೆಹಲಿ: ಭಾರತಕ್ಕೆ ವಲಸೆ ಬಂದಿರುವ ಅಫ್ಘಾನಿಸ್ತಾನ, ಬಾಂಗ್ಲಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಲ್ಲಿನ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಡಿ.11 ರಂದು ಅಂಗೀಕಾರ ದೊರೆತಿದೆ.
ಈ ಮೂಲಕ ಸಂಸತ್ ನ ಉಭಯ ಸದನಗಳಲ್ಲಿಯೂ ಮಸೂದೆ ಅಂಗೀಕಾರಗೊಂಡಿದ್ದು, ಕಾನೂನಾಗಿ ಮಾರ್ಪಾಡಾಗಿದೆ. ಮೇಲ್ಮನೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಸೂದೆ ಮಂಡಿಸಿದ್ದರು. ಸುದೀರ್ಘ ಚರ್ಚೆಯ ನಂತರ ಸದನದ ಸಭಾಧ್ಯಕ್ಷರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಸೂದೆಯನ್ನು ಮತಕ್ಕೆ ಹಾಕಿದರು. ಒಟ್ಟಾರೆ 209 ಸದಸ್ಯರ ಬಲವಿರುವ ರಾಜ್ಯಸಭೆಯಲ್ಲಿ ವಿಧೇಯಕದ ಪರವಾಗಿ 125 ಮತಗಳು ಬಂದರೆ, ವಿರುದ್ಧವಾಗಿ 105 ಮತಗಳು ಚಲಾವಣೆಯಾದವು.
ಲೋಕಸಭೆಯಲ್ಲಿ ಮಸೂದೆಯ ಪರವಾಗಿ ನಿಂತಿದ್ದ ಶಿವಸೇನೆ ರಾಜ್ಯಸಭೆಯಲ್ಲಿ ಮತದಾನವನ್ನು ಬಹಿಷ್ಕರಿಸಿದೆ.