ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನಿಯರ್ ರೆಡ್‍ಕ್ರಾಸ್ ವಿದ್ಯಾರ್ಥಿಗಳಿಂದ ಶುಚಿತ್ವ ಆರೋಗ್ಯಕ್ಕೆ ಸಂಬಂಧಿಸಿ ವಿವಿಧ ಕಾರ್ಯಕ್ರಮಗಳು ಇತ್ತೀಚೆಗೆ ಜರಗಿತು.
ಹಾಡು ನೃತ್ಯದ ಮೂಲಕ ವಿದ್ಯಾರ್ಥಿಗಳು ಮನರಂಜಿಸಿದರು. ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಶಾಲಾ ಅಧ್ಯಾಪಕರಾದ ಲಕ್ಷ್ಮೀಶ ಹಾಗೂ ವೆಂಕಟ್ರಮಣ ಕಾರಂತ ನೇತೃತ್ವ ವಹಿಸಿದ್ದರು. ಶಾಲಾ ಪ್ರಬಂಧಕ ಡಾ.ಜಯಪ್ರಕಾಶ್ ನಾರಾಯಣ ಇವರು ಕಾರ್ಯಕ್ರಮಗಳು ಇನ್ನಷ್ಟು ಮೂಡಿ ಬರಲೆಂದು ಹಾರೈಸಿದರು. ಕಲಿಯುವಿಕೆಯಲ್ಲಿ ಪ್ರಥಮ ದ್ವಿತೀಯ ಸ್ಥಾನ ಬಂದ ಮಕ್ಕಳಿಗೆ ಬಹುಮಾನ ರೆಡ್‍ಕ್ರಾಸ್ ಸಂಸ್ಥೆಯ ವತಿಯಂದ ನೀಡಿದರು. ಶಾಲಾ ವತಿಯಿಂದ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರೀಶ.ಸಿ, ಮಾತೃಸಂಘದ ಅಧ್ಯಕ್ಷೆ ದೇವಕಿ, ಅಧ್ಯಾಪಕ ವೃಂದದವರು ಸಹಕರಿಸಿದರು.