ಮಂಜೇಶ್ವರ: ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ನೂತನ ಭವ್ಯ ಮಂದಿರದ ನಿರ್ಮಾಣದ ಬಗ್ಗೆ ನೂತನ ಸಮಿತಿ ರೂಪೀಕರಿಸಲು ಅಯ್ಯಪ್ಪ ಸೇವಾ ಸಂಘ ಮೀಯಪದವು ಇದರ ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ಮತ್ತು ಭಕ್ತಾದಿಗಳ ವಿಶೇಷ ಸಭೆ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಸಭೆಯಲ್ಲಿ ಮೀಯಪದವು ಅಯ್ಯಪ್ಪ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ರೈ ಕಳ್ಳಿಗೆ, ಕುರುಡಪದವು ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಶಂಕರನಾರಾಯಣ ಭಟ್ ಕುಡಿಯ ಮೂಲೆ, ಕೊಳಚಪ್ಪು ಶಾಸ್ತಾವೇಶ್ವರ ದೇವಸ್ಥಾನದ ಮೊಕ್ತೇಸರ ರಘುನಾಥ ಶೆಟ್ಟಿ ಕೊಮ್ಮಂಗಳ, ಶ್ರೀ ರಕ್ತೇಶ್ವರೀ ದೈವಸ್ಥಾನ ಹೊಸಕಟ್ಟೆ ಬೆಜ್ಜ ಕೇತ್ರದ ಸೇವಾ ಟ್ರಸ್ಟ್ ಅಧ್ಯಕ್ಷ ರಂಜಿತ್ ಕದ್ರಿಪಾಯ, ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲು ಸಂಘದ ಅಧ್ಯಕ್ಷ ಶಂಕರನಾರಾಯಣ ಭಟ್ ಮುಂದಿಲ, ಮೀಯಪದವು ಮೊಗೇರ ಸೇವಾ ಸಮಿತಿ ಅಧ್ಯಕ್ಷ ಸಂಜೀವ, ಶ್ರೀ ಅಯ್ಯಪ್ಪ ಭಜನಾ ಸಂಘ ಕುಳೂರು ಚಿನಾಲ ಇದರ ಅಧ್ಯಕ್ಷ ಮೋನಪ್ಪ ಪೂಜಾರಿ ಕಲ್ಕಾರು, ಮೀಯಪದವು ಅಯ್ಯಪ್ಪ ದೀಪೆÇೀತ್ಸವ ಸಮಿತಿ ಅಧ್ಯಕ್ಷ ದಾಮೋದರ ಸಿ, ಮೀಯಪದವು ಅಯ್ಯಪ್ಪ ಸೇವಾ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಎಸ್.ಚಿಗುರುಪಾದೆ ಉಪಸ್ಥಿತರಿದ್ದರು.
ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಆರ್.ಎಸ್.ಎಸ್. ನೇತಾರ ತಿಮ್ಮಪ್ಪ ಮೈತಾಳ್, ವಿಶ್ವ ಹಿಂದೂ ಪರಿಷತ್ ಮೀಂಜ ಮಂಡಲ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶ್ರೀಧರ ರಾವ್ ಆರ್.ಎಂ, ರಂಜಿತ್ ಗುರುಸ್ವಾಮಿ ಶುಭಾಶಂಸನೆ ಮಾತುಗಳನ್ನಾಡಿದರು.
ಸದಾಶಿವ ರಾವ್ ಟಿ.ಡಿ. ಸ್ವಾಗತಿಸಿದರು. ರಾಜಾರಾಮ ರಾವ್ ಮೀಯಪದವು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುಷ್ಪರಾಜ ಶೆಟ್ಟಿ ತಲೆಕಳ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಮೀಯಪದವು ವಂದಿಸಿದರು. ಶಿಕ್ಷಕ ರಘುವೀರ ಮೀಯಪದವು ಅವರು ಪ್ರಾರ್ಥನೆ ಹಾಡಿದರು.
ಸಭೆಯಲ್ಲಿ ನೂತನ ಜೀರ್ಣೋದ್ಧಾರ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಗೌರವ ಮಾರ್ಗದರ್ಶಕರಾಗಿ ಶ್ರೀ ಯೋಗಾನಂದ ಸ್ವಾಮೀಜಿ ಕೊಂಡೆವೂರು, ಬ್ರಹ್ಮಶ್ರೀ ಪೆÇಳ್ಳಕಜೆ ಗೋವಿಂದ ಭಟ್, ವೇದ ಮೂರ್ತಿ ಬೋಳಂತ ಕೋಡಿ ರಾಮ ಭಟ್, ವೇದ ಮೂರ್ತಿ ಗಣೇಶ ನಾವಡ, ಚಿಗುರುಪಾದೆ, ಗೋವಿಂದ ನಾಯರ್ ಗುರುಸ್ವಾಮಿ ಕಾಂಞಂಗಾಡ್, ವಾಸ್ತುಶಿಲ್ಪಿಯಾಗಿ ಬೆದ್ರಡ್ಕ ರಮೇಶ ಕಾರಂತ, ಗೌರವಾಧ್ಯಕ್ಷರಾಗಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ರಂಜಿತ್ ಕದ್ರಿ ಪಾಯ, ಅಧ್ಯಕ್ಷರಾಗಿ ಶ್ರೀಧರ ರಾವ್ ಆರ್.ಎಂ. ಮೀಯಪದವು, ಆಡಳಿತ ಮಂಡಳಿ ಗೌರವಾಧ್ಯಕ್ಷರು ಎ.ಶಂಕರನಾರಾಯಣ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಶರಟ್ಟಿ ಪಳ್ಳತ್ತಡ್ಕ, ಕಾರ್ಯಾಧ್ಯಕ್ಷ ಸುಬ್ಬಣ್ಣ ಆಳ್ವ ಬಾಣಬೆಟ್ಟು, ಕೋಶಾಧಿಕಾರಿ ಟಿ.ಡಿ.ಸದಾಶಿವ ರಾವ್, ಲೆಕ್ಕ ಪರಿಶೋಧಕರು ಲಿಂಗಪ್ಪ ಶೆಟ್ಟಿ ಬೆಜ್ಜಂಗಳ ಹಾಗೂ ವಿವಿಧ ಕ್ಷೇತ್ರದ ಅನುಭವಗಳಿಂದ ಗೌರವ ಸಲಹೆಗಾರರನ್ನು, ಉಪಾಧ್ಯಕ್ಷರನ್ನು, ಕಾರ್ಯದರ್ಶಿಗಳನ್ನು ಜೊತೆ ಕಾರ್ಯದರ್ಶಿಗಳನ್ನು ಹಾಗೂ 101ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.