ಕಾಸರಗೋಡು: ಶಾರೀರಿಕ ಕಸರತ್ತು ಪ್ರಧಾನವಾಗಿರುವ ಕಿರು ನೌಕೆಗಳಲ್ಲಿ ನಡೆಸುವ ಜಲಕ್ರೀಡೆ ಕಯಾಕಿಂಗ್ ಒಂದು ಕಲಾಪ್ರಕಾರವಲ್ಲದೇ ಇದ್ದರೂ, ಸ್ಪರ್ಧಾ ಗಾದಿಯಲ್ಲಿ ಇಲ್ಲದೇ ಹೋದರೂ, ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಸ್ಥಾನ ಪಡೆದಿದೆ.
ಸಾಹಸ ಪ್ರಧಾನವಾದ ಈ ಜಲ ವಿನೋದ ಕ್ರೀಡೆಯಲ್ಲಿ ಭಾಗವಹಿಸಲು ರಾಜ್ಯದಾದ್ಯಂತದ ವಿದ್ಯಾರ್ಥಿಗಳಿಗೆ ಉತ್ಸಾಹ ಕಡಿಮೆಯೂ ಅಲ್ಲ. ಪಾಲಾ ಭಾಸ್ಕರ ಬಾಗವತರ್, ಗುರು ಚಂದು ಪಣಿಕ್ಕರ್ ವೇದಿಕೆಗಳು ಎಂಬ ನಾಮಧೇಯ ಹೊತ್ತ ಪಡನ್ನಕ್ಕಾಡು ಬೇಕಲ್ ಕ್ಲಬ್‍ನಲ್ಲಿ ಈ ಕಯಾಕಿಂಗ್ ನಡೆಯಿತು. ವಿದ್ಯಾರ್ಥಿಗಳೊಂದಿಗೆ ಕೆಲವು ಪೆÇೀಷಕರೂ ಈ ಕ್ರೀಡೆಯಲ್ಲಿ ಭಾಗವಹಿಸಿದರು. ಬೇಕಲ ಕ್ಲಬ್ ಬಳಿಯ ಕಾರ್ಯಂಗೋಡು ಹೊಳೆಯಲ್ಲಿ ಒಂದೂವರೆ ಕಿ.ಮೀ. ಸುತ್ತಳತೆಯಲ್ಲಿ ಕಯಾಕಿಂಗ್ ನಡೆಸಲಾಯಿತು. ಸಿಂಗಲ್, ಡಬ್ಬಲ್ ಹೀಗೆ 9 ಕಿರುನೌಕೆಗಳು ಅವಶ್ಯಕತೆಗನುಸಾರ ಸಿದ್ಧವಿತ್ತು. ಡಿ.1 ರಂದು ಕವ್ವಾಯಿ ಹೊಳೆಯಲ್ಲಿ ಕಯಾಕಿಂಗ್ ನಡೆಯಿತು. ಡಿ.2 ರಂದೂ ಕವ್ವಾಯಿ ಹೊಳೆಯಲ್ಲಿ ಕಯಾಕಿಂಗ್ ನಡೆಯಲಿದೆ.
ಬೇಕಲ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಬಿ.ಆರ್.ಡಿ.ಸಿ.)ದ ಸ್ಮೈಲ್ ಯೋಜನೆ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಮಲಬಾರ್ ಅಡ್ವೆಂಚರ್ಸ್ ಎಂಬ ಸಂಸ್ಥೆ ಕಯಾಕಿಂಗ್ ವ್ಯವಸ್ಥೆಗೊಳಿಸಿತ್ತು. ತಲಾ 200 ರೂ.ನಂತೆ ಶುಲ್ಕ ಇದ್ದು, 30 ನಿಮಿಷ ಕಯಾಕಿಂಗ್ ನಡೆಸಬಹುದಾಗಿತ್ತು.