ಬದಿಯಡ್ಕ: ಮಹಾರಾಷ್ಟ್ರದಲ್ಲಿ ಉದ್ಯೋಗದ ಸ್ಥಳದಲ್ಲಿ ಅಪಘಾತಕ್ಕೀಡಾಗಿ ತೀವ್ರ ನಿಗಾದಲ್ಲಿದ್ದ ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮಿಂಚಿನಡ್ಕ ದಿ. ವೆಂಕಟಗಿರಿಯವರ ಪುತ್ರ ಚೈತನ್ಯಕೃಷ್ಣ (22) ಮಂಗಳವಾರ ಬೆಳಿಗ್ಗೆ ಮೃತರಾದರು.
ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಫೈರ್-ಸೇಫ್ಟಿ ಉದ್ಯೋಗಿಯಾಗಿದ್ದರು. ನೂತನ ಕಟ್ಟಡದ ಸೇಫ್ಟಿ ಅಧಿಕಾರಿಯಾಗಿ ಕಾಮಗಾರಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ವೇಳೆ 4ನೇ ಅಂತಸ್ತಿನಿಂದ ಕಬ್ಬಿಣದ ರಾಡ್ ತಳಭಾಗದಲ್ಲಿದ್ದ ಇವರ ತಲೆಗೆ ಬಿದ್ದು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದರು. ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದರು. ಶುಕ್ರವಾರ ಸಂಜೆವೇಳೆ ಘಟನೆ ನಡೆದಿದೆ. ಔರಂಗಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರನಿಗಾ ವಿಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಖಾಸಗಿ ಸಂಸ್ಥೆಯಲ್ಲಿ ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿದ್ದರು. ತಾಯಿ ವಿದ್ಯಾ, ಅಜ್ಜ ಮಿಂಚಿನಡ್ಕ ಕೃಷ್ಣ ಭಟ್ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.