HEALTH TIPS

ಭಜನೆಯಿಂದ ಧನಾತ್ಮಕ ಚಿಂತನೆಗಳು ಉದ್ದೀಪನಗೊಳ್ಳುತ್ತದೆ : ಮಾಣಿಲ ಶ್ರೀ- ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಭಜನೋತ್ಸವ ಸಂಪನ್ನ


         ಬದಿಯಡ್ಕ: ಭಜನೆಯಿಂದ ಧನಾತ್ಮಕ ಚಿಂತನೆಗಳು ಮನದಲ್ಲಿ ಉದ್ದೀಪನಗೊಳ್ಳುದರೊಂದಿಗೆ ಋಣಾತ್ಮಕತೆಗೆ ಆಸ್ಪದವಿರುವುದಿಲ್ಲ. ಕಲಿಯುಗದ ಕಲ್ಮಶಗಳು ತೊಲಗಿ ಭವ್ಯ ಭಾರತ ಬೆಳಗುವಂತಾಗಲು ಭಜನೆ ಅತೀ ಅಗತ್ಯ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜೀ ತಮ್ಮ ಆಶೀರ್ವಚನದಲ್ಲಿ ನುಡಿದರು.
  ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ನೇತೃತ್ವದಲ್ಲಿ ಶ್ರೀಮಂದಿರದಲ್ಲಿ ಶನಿವಾರ ಸೂರ್ಯೋದಯದಿಂದ ರಾತ್ರಿ ಮಹಾಪೂಜೆಯ ತನಕ ಜರಗಿದ ಭಜನೋತ್ಸವದ ಮಂಗಲಸಮಯದಲ್ಲಿ ಭಜನೆಯಲ್ಲಿ ಪಾಲ್ಗೊಂಡ ಅವರು ನಂತರ ನಡೆದ ಸಮಾರಂಭದಲ್ಲಿ ಆಶೀರ್ವಚನವನ್ನು ನೀಡಿದರು.
     ಎಲ್ಲರ ಆತ್ಮದಲ್ಲಿ ಭಗವಂತನ ಚೇತನ ಹರಿಯುತ್ತದೆ. ಆಚಾರ, ಸಂಸ್ಕøತಿ, ಜೀವನ ಪದ್ಧತಿಗಳನ್ನು ನಾವು ಸದಾ ಉಳಿಸಿಕೊಳ್ಳಬೇಕು. ಮನದಲ್ಲಿರುವ ಮತ್ಸರವನ್ನು ಹೋಗಲಾಡಿಸಿಕೊಳ್ಳಬೇಕು. ಜೀವನದಲ್ಲಿ ನಾವು ತಪ್ಪನ್ನೇ ಮಾಡಬಾರದು. ತಪ್ಪು ಮಾಡಿ ಕ್ಷಮೆ ಎನ್ನುವ ಮಾತಿಗೆ ಅರ್ಥವಿಲ್ಲ ಎಂದು ತಿಳಿಸಿದ ಅವರು ಶ್ರೀ ಮಂದಿರದ ಪೂರ್ಣ ಅಭಿವೃದ್ಧಿಗೆ ಎಲ್ಲರೂ ಶ್ರಮವಹಿಸಬೇಕು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಊರು ಅಭಿವೃದ್ಧಿಯನ್ನು ಕಾಣಬೇಕು. ದೇಶಕ್ಕೋಸ್ಕರ ದೇವರಲ್ಲಿ ಸದಾ ಪ್ರಾರ್ಥಿಸಬೇಕು. ಮನೆಯ ಪರಿಸರದಲ್ಲಿ ತುಳಸಿ ಮೊದಲಾದ ಹೂವಿನ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಆರೋಗ್ಯವಂತ ಪರಿಸರವನ್ನು ನಿರ್ಮಿಸಬೇಕು ಎಂದರು.
     ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ, ಗುರುಸ್ವಾಮಿ ರಮೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವೀಂದ್ರ ಮಾಸ್ತರ್ ಸ್ವಾಗತಿಸಿ, ಮಂಜುನಾಥ ಡಿ. ಮಾನ್ಯ ವಂದಿಸಿದರು. ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಇವರು ಸೂರ್ಯೋದಯ ಕಾಲದಲ್ಲಿ ದೀಪಬೆಳಗಿಸಿ ಭಜನೋತ್ಸವಕ್ಕೆ ಚಾಲನೆ ನೀಡಿದ್ದರು. ವಿವಿಧ ಭಜನಾ ತಂಡಗಳು ಭಜನಾ ಸೇವೆಯನ್ನು ನಡೆಸಿಕೊಟ್ಟರು. ಊರಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries