ನವದೆಹಲಿ: ಕಳೆದ ಮೂರು ತಿಂಗಳಲ್ಲಿ ರಡನೇ ಬಾರಿಗೆ ಸುಪ್ರೀಂ ಕೋರ್ಟ್ 'ಮೊಹರು ಹಾಕಿರುವ ಲಕೋಟೆ ನೀಡುವ' ಅಭ್ಯಾಸವನ್ನು ನಿರಾಕರಿಸಿದೆ. ಬುಧವಾರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವ ವೇಳೆ ಕೋರ್ಟ್ ಈ ಪದ್ದತಿಯನ್ನು ನಿರಾಕರಿಸಿದೆ.
ಮೊಹರು ಮಾಡಿದ ಕವರ್‍ಗಳಲ್ಲಿ ದಾಖಲೆಗಳನ್ನು ಸೇರಿಸುವ ತನಿಖಾ ಏಜೆನ್ಸಿಗಳು ಮತ್ತು ಅವುಗಳ ಮೇಲೆ ಅವಲಂಬಿತವಾಗಿರುವ ನ್ಯಾಯಾಲಯಗಳು ಆರೋಪಿಗಳ ನ್ಯಾಯಯುತ ವಿಚಾರಣೆಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಉನ್ನತ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.ನ್ಯಾಯಮೂರ್ತಿ ಆರ್ ಬಾನುಮತಿ ನೇತೃತ್ವದ ನ್ಯಾಯಪೀಠವು ಆರೋಪಿಗಳಿಗೆ ನೀಡದ ಇಂತಹ ಗೌಪ್ಯ ದಾಖಲೆಗಳು ಮುಕ್ತ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕನ್ನು ಭಂಗಪಡಿಸುತ್ತದ ಎಂದು ಅಭಿಪ್ರಾಯಪಟ್ಟಿದೆ.ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹೃಷಿಕೇಶ ರಾಯ್ ಸೇರಿದಂತೆ ನ್ಯಾಯಪೀಠ ದೆಹಲಿ ಹೈಕೋರ್ಟ್‍ನಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮೊಹರು ಕವರ್ ಲಕೋಟೆಯನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿದೆ.
ಮಾಜಿ ಗೃಹ ಮತ್ತು ಹಣಕಾಸು ಸಚಿವರಿಗೆ ಜಾಮೀನು ನಿರಾಕರಿಸುವಾಗ, ಈ ಮೊಹರು ಕವರ್ ಲಕೋಟೆಯಲ್ಲಿನ ಕೆಲ ಸಾಕ್ಷಾಧಾರಗಳನ್ನು ಹೈಕೋರ್ಟ್ ಅವಲಂಬಿಸಿತ್ತು.