HEALTH TIPS

ಕುಂಬಳೆಯಲ್ಲಿ ಜನೌಷಧ ಕೇಂದ್ರ ಆರಂಭ- ಬಡರೋಗಿಗಳಿಗೆ ಚಿಕಿತ್ಸೆ ಒದಗಿಸುವಲ್ಲಿ, ಶೋಷಣೆ ತಡೆಗಟ್ಟುವಲ್ಲಿ ಮೋದಿ ಸರ್ಕಾರ ಕೈಗೊಂಡ ಕ್ರಮ ಶ್ಲಾಘನೀಯ : ನ್ಯಾಯವಾದಿ ಕೆ.ಶ್ರೀಕಾಂತ್

 
       ಕುಂಬಳೆ: ಬಡರೋಗಿಗಳಿಗೆ ಚಿಕಿತ್ಸೆ ದೊರೆಯುವಲ್ಲಿ ಮತ್ತು ಅವರ  ಶೋಷಣೆ ತಡೆಗಟ್ಟುವಲ್ಲಿ ಮೋದಿ ಸರಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ.
     ಕುಂಬಳೆಯಲ್ಲಿ  ಪ್ರಧಾನ ಮಂತ್ರಿ ಜನೌಷಧ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
       ದೇಶದ ಬಡ ರೋಗಿಗಳಿಗೆ ಚಿಕಿತ್ಸೆ ದೊರೆಯುವಂತೆ ಮಾಡಲು ಹಲವಾರು ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು ಚಿಕಿತ್ಸಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡುತ್ತಿದೆ. ರೋಗಿಗಳ ಶೋಷಣೆಯನ್ನು ತಡೆಗಟ್ಟಲು ಮೋದಿ ಸರ್ಕಾರ ಕಠಿನ ಕ್ರಮಕೈಗೊಂಡಿದೆ. ಮಿತವಾದ ದರದಲ್ಲಿ ಉತ್ತಮ ಗುಣಮಟ್ಟದ ಮದ್ದುಗಳು ಜನೌಷ„ ಕೇಂದ್ರಗಳಲ್ಲಿ ಲಭಿಸುತ್ತಿದೆಯೆಂದೂ ಇದರ ಪ್ರಯೋಜನವನ್ನು ಜನರು ಪಡಕೊಳ್ಳಬೇಕೆಂದೂ ಶ್ರೀಕಾಂತ್ ಆಗ್ರಹಿಸಿದರು. ಜನೌಷಧಿ ಕೇಂದ್ರ ಬರೀ ವ್ಯಾಪಾರ ದೃಷ್ಟ್ಟಿಯಿಂದ ಆರಂಭಿಸಲಾಗುತ್ತಿಲ್ಲ. ಬದಲಾಗಿ ಬಡಜನರ ಸೇವಾ ಕೇಂದ್ರವಾಗಿ ಕಾರ್ಯಾಚರಿಸುವಂತಹ ಕೇಂದ್ರವೆಂದು ಅವರು ಹೇಳಿದರು.
    ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಭಾರತದ ಸುಮಾರು 50 ಕೋಟಿ ಬಡವರಿಗೆ ಐದು ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ದೊರೆಯುತ್ತಲಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಯೋಜನೆಯಾಗಿ ಗುರುತಿಸಲ್ಪಟಿದೆಯೆಂದು ಶ್ರೀಕಾಂತ್ ತಿಳಿಸಿದರು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕೇರಳ ಸರ್ಕಾರ ಮೀನಮೇಷ ಎಣಿಸುತ್ತಿದೆಯೆಂದು ಅವರು ಆಪಾದಿಸಿದರು.
      ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸತ್ಯಶಂಕರ ಭಟ್, ಪಂಚಾಯತಿ ಸದಸ್ಯರಾದ ರಮೇಶ್ ಭಟ್, ಸುಧಾಕರ ಕಾಮತ್, ಸಮಾಜ ಸೇವಕರಾದ ಕೆ.ಶಂಕರ ಆಳ್ವ ಮುಂತಾದವರು ಉಪಸ್ಥಿತರಿದ್ದರು. ಜನೌಷಧಿ ಅಂಗಡಿ ಮಾಲಕರಾದ ಗೋಪಾಲಕೃಷ್ಣ ಕಬೆಕ್ಕೋಡು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries