ಕಾಸರಗೋಡು: ಜಿಲ್ಲೆಯಲ್ಲಿ ವನ್ಯಜೀವಿಗಳ ಆಕ್ರಮಣ ನಿಯಂತ್ರಣಕ್ಕೆ ಪ್ರಬಲ ಪ್ರತಿರೋಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರ ಗಂಭೀರ ಪರಿಶೀಲನೆ ನಡೆಸುತ್ತಿದೆ ಎಂದು ಅರಣ್ಯ ಸಚಿವ ನ್ಯಾಯವಾದಿ ಕೆ.ರಾಜು ತಿಳಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಅರಣ್ಯ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಾಡಾನೆಗಳ ಕಾಟ ನಿಯಂತ್ರಣಕ್ಕೆ 3.95 ಕಿ.ಮೀ. ಆನೆ ಗೋಡೆ, 71.75 ಮಿಮೀ ಸೌರಶಕ್ತಿ ತಂತಿ ಬೇಲಿ ನಿರ್ಮಿಸಲಾಗಿದೆ. ಈ ವರ್ಷ ನೂತನವಾಗಿ 20 ಕಿ.ಮೀ. ಸೌರಶಕ್ತಿ ತಂತಿ ಬೇಲಿ ನಿರ್ಮಿಸುವ ಕ್ರಮ ಕೈಗೊಳ್ಳಲಾಗುವುದು. ಮಲೆನಾಡ ಹೆದ್ದಾರಿ ನಿರ್ಮಾಣ ಸಂಬಂಧ ಲೋಕೋಪಯೋಗಿ ಖಾತೆಯ ಸಹಭಾಗಿತ್ವದಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಪರಪ್ಪ-ದೇಲಂಪಾಡಿ ರಸ್ತೆಯ ವನಾಂತರ ಪ್ರದೇಶದ ಹಾದಿಯನ್ನು ಕಾಂಕ್ರೀಟೀಕರಣ ಗೊಳಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಸಿ.ಸಿ.ಎಫ್ ಮುಖ್ಯಸ್ಥ ರಾಜೇಶ್ ರವೀಂದ್ರನ್ ಅವರಿಗೆ ಹೊಣೆ ನೀಡಲಾಗಿದೆ ಎಂದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಕೆ.ಕುಂಞÂರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ನಗರಸಭೆ ಅಧ್ಯಕ್ಷ ಬಿಫಾತಿಮಾ ಇಬ್ರಾಹಿಂ, ಪ್ರಧಾನ ಅರಣ್ಯ ಕನ್ಸರ್‍ವೇಟರ್ ದೇವೇಂದ್ರ ಕುಮಾರ್ ವರ್ಮಾ, ಸಿ.ಸಿ. ಮುಖ್ಯಸ್ಥ ರಾಜೇಶ್ ರವೀಂದ್ರನ್, ಅರಣ್ಯ ಕನ್ಸರ್‍ವೇಟರ್ ಎನ್.ಟಿ.ಸಾಜನ್, ಡಿ.ಎಫ್.ಒ. ಅನೂಪ್ ಕುಮಾರ್ ಪಿ. ಕೆ., ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅರಣ್ಯ ಇಲಾಖೆಗೆ ಸಂಬಂಧಿಸಿ ಸಾರ್ವಜನಿಕರಿಗೆ ದೂರು ಸಲ್ಲಿಸುವ ನಿಟ್ಟಿನಲ್ಲಿ ಸಚಿವರ ನೇತೃತ್ವದಲ್ಲಿ ಎಲ್ಲ ಜಿಲ್ಲೆಗಳಲ್ಲಿ ನಡೆಸಲಾಗುವ ಅರಣ್ಯ ಅದಾಲತ್ ಜಿಲ್ಲೆಯಲ್ಲೂ ನಡೆಸಲಾಗಿದೆ. ಈ ಮೂಲಕ ಇಲ್ಲಿ 13ನೇ ಅದಾಲತ್ ಜರಗಿತು.
* ಅರಣ್ಯ ಅದಾಲತ್ : 161 ದೂರುಗಳ ಪರಿಶೀಲನೆ:
ಅರಣ್ಯ ರಸ್ತೆಗಳಿಗೆ ಮತ್ತು ವನ್ಯಜೀವಿಗಳ ಕಾಟ ಸಂಬಂಧ ದೂರುಗಳು ಅದಾಲತ್‍ನಲ್ಲಿ ಸಲ್ಲಿಕೆಯಾಗಿದ್ದುವು. ಒಟ್ಟು 161 ದೂರುಗಳನ್ನು ಪರಿಶೀಲಿಸಲಾಗಿದ್ದು, ಎಲ್ಲದಕ್ಕೂ ತೀರ್ಪು ನೀಡಲಾಗಿದೆ. ಇವುಗಳಲ್ಲಿ 105 ದೂರುಗಳಲ್ಲಿ ಅರ್ಜಿದಾರರಿಗೆ ಪೂರಕವಾಗಿ ತೀರ್ಪು ಲಭಿಸಿದೆ. ಮುಂದುವರಿದ ಕ್ರಮಗಳಿಗಾಗಿ 48 ದೂರುಗಳನ್ನು ಮೀಸಲಿರಿಸಲಾಗಿದೆ. ವಿವಿಧ ದೂರುಗಳಿಗೆ ಸಂಬಂ„ಸಿ 24.95 ರೂ.ನ ನಷ್ಟಪರಿಹಾರವನ್ನು ಅದಾಲತ್ ವೇದಿಕೆಯಲ್ಲೇ ಹಸ್ತಾಂತರಿಸಲಾಗಿದೆ.