ಕಾಸರಗೋಡು: ಕೇರಳ ತುಳು ಅಕಾಡೆಮಿ ವತಿಯಿಂದ ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣ ಡಿ.17, 18ರಂದುನಗರದ ಲಲಿತ ಕಲಾಸದನದಲ್ಲಿ ಜರುಗಲಿದೆ. ಸಮಾರಂಭದ ಆಮಂತ್ರಣಪತ್ರಿಕೆ ಬಿಡುಗಡೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಕಿರುಸಭಾಂಗಣದಲ್ಲಿ ಜರುಗಿತು.
ಕಂದಾಯ ಸಚಿವ ಇ.ಚಂದ್ರಶೇಖರನ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್,ಕಾರ್ಯದರ್ಶಿ ವಿಜಯಕುಮಾರ್ ಪಾವಲ,ಕೆ.ಕೆ.ಕುಮಾರನ್, ರವೀಂದ್ರನ್ ಪಾಡಿ, ಬಿ.ಕೆ.ಸುಕುಮಾರ್, ಭಾರತೀ ಬಾಬು, ಜಯಂತಿ ಸುವರ್ಣ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶಂಕರ ಸ್ವಾಮಿ ಕೃಪಾ, ಬಿ.ಎಂ.ಗಂಗಾಧರ, ರಾಜೀವಿ ಕೆ., ರವೀಂದ್ರ ರೈ ಮಲ್ಲಾವರ,ಎಂ.ಎಂ.ಗಂಗಾಧರನ್ ಮೊದಲಾದವರು ಉಪಸ್ಥಿತರಿದ್ದರು.