ಕಾಸರಗೋಡು: ಕಾಸರಗೋಡು ತಾಲೂಕು ಸಪ್ಲೈ ಕಚೇರಿ ವ್ಯಾಪ್ತಿಯಲ್ಲಿ ನಿವಾಸಿಗಳಾಗಿರುವ ಪಡಿತರ ಚೀಟಿ ಮಾಲೀಕರಲ್ಲಿ ಆದ್ಯತೆ(ಬಿ.ಪಿ.ಎಲ್.) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವವರಿಗಾಗಿ ಅದಾಲತ್ ಕಾಸರಗೋಡು ತಾಲೂಕು ಕಚೇರಿಯಲ್ಲಿ ನಡೆಯಲಿದೆ. ಮೊಗ್ರಾಲ್ ಪುತ್ತೂರು, ಮಧೂರು, ಕಾರಡ್ಕ, ದೇಲಂಪಾಡಿ, ಚೆಂಗಳ, ಬದಿಯಡ್ಕ, ಕುಂಬಡಾಜೆ, ಬೆಳ್ಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಂದಿಗೆ ಡಿ.5ರಂದು ಅದಾಲತ್ ನಡೆಯಲಿದೆ. ಚೆಮ್ನಾಡ್, ಕುತ್ತಿಕೋಲ್, ಬೇಡಡ್ಕ, ಮುಳಿಯಾರು, ಕಾಸರಗೋಡು ನಗರಸಭೆ ಪ್ರದೇಶಗಳ ಮಂದಿಗೆ ಡಿ.6ರಂದು ಅದಾಲತ್ ಜರುಗುವುದು. ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30 ವರೆಗೆ ಅದಾಲತ್ ಇರುವುದು. ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅವಕಾಶ. ಅಂದು ನೂತನ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಒಮ್ಮೆ ಅದಾಲತ್ ನಲ್ಲಿ ಭಾಗವಹಿಸಿದವರು ಮತ್ತೆ ಹಾಜರಾಗಬೇಕಿಲ್ಲ.
ಬಿ.ಪಿ.ಎಲ್. ಪಡಿತರ ಚೀಟಿ ಅದಾಲತ್
0
ಡಿಸೆಂಬರ್ 05, 2019