ಕಾಸರಗೋಡು: ನೆಲ್ಲಿಕುಂಜೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಭಕ್ತಿ, ಶ್ರದ್ಧೆಯಿಂದ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಉತ್ಸವದ ಅಂಗವಾಗಿ ಬೆಳಗ್ಗೆ ಮಹಾಗಣಪತಿ ಪೂಜೆ, ಉಷಕಾಲ ಪೂಜೆ, ಪಂಚಾಮೃತಾಭಿಷೇಕ, ಮಹಾಪೂಜೆ, ಷಷ್ಠಿ ಉತ್ಸವ, ಪ್ರಸಾದ ವಿತರಣೆ, ಷಷ್ಠಿ ವ್ರತದವರಿಗೆ ಬಲಿವಾಡು ಮತ್ತು ಅನ್ನದಾನ ಹಾಗು ತುಲಾಭಾರ ಕಾರ್ಯಕ್ರಮ ಜರಗಿತು.
ಸಂಜೆ ದೀಪಾರಾಧನೆ, ಶ್ರೀ ಸತ್ಯಸಾಯಿ ಸೇವಾ ಸಮಿತಿ ಮತ್ತು ಶ್ರೀ ಸುಬ್ರಹ್ಮಣ್ಯ ಭಜನಾ ಸಂಘದಿಂದ ಭಜನೆ, ರಾತ್ರಿ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.