ಮಂಜೇಶ್ವರ: ರಾಜ್ಯ ಹಿಂದುಳಿದ ಜನಾಂಗ ಅಭಿವೃದ್ಧಿ ನಿಗಮ ಜಿಲ್ಲಾ ಕಚೇರಿ ನೇತೃತ್ವದಲ್ಲಿ ಮಂಜೇಶ್ವರ ಸಿ.ಡಿ.ಎಸ್. ಮೈಕ್ರೋ ಕ್ರೆಡಿಟ್ ಸಾಲ ವಿತರಣೆ ಬುಧವಾರ ಜರಗಿತು. ಮಂಜೇಶ್ವರ ಗ್ರಾಮಪಂಚಾಯತಿ ಸಿ.ಡಿ.ಎಸ್.ನ 45 ನೆರೆಕರೆ ಕೂಟಗಳ 346 ಫಲಾನುಭವಿಗಳಿಗಾಗಿ 169.96 ಲಕ್ಷ ರೂ. ಸಾಲವಿತರಣೆ ನಡೆಸಲಾಗಿದೆ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ನಿವಾಸ ಗಿಳಿವಿಂಡು ಅಂಗಣದಲ್ಲಿ ನಡೆದ ಸಮಾರಂಭವನ್ನು ಶಾಸಕ ಎಂ.ಸಿ.ಕಮರುದ್ದೀನ್ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಬಿ.ಸಿ.ಡಿ.ಸಿ. ಜಿಲ್ಲಾ ಸಹಾಯಕ ಪ್ರಬಂಧಕ ಎ.ವಿ.ಕೃಷ್ಣಕುಮಾರಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಮಂಜೇಶ್ವರ ಗ್ರಾಮಪಂಚಾಯತಿ ಸದಸ್ಯರಾದ ಕೆ.ಎಂ.ಕೆ. ಅಬ್ದುಲ್ ರಹಮಾನ್ ಹಾಜಿ, ಶೋಭಾ ಶೆಟ್ಟಿ, ಸುಪ್ರಿಯಾ ಶೆಣೈ, ಉಸ್ತಫಾ, ಫೈಝಲ್ ತಂಙಳ್ ಉಪಸ್ಥಿತರಿದ್ದರು. ಮಂಜೇಶ್ವರ ಗ್ರಾಮಪಂಚಾಯತಿ ಸಹಾಯಕ ಕಾರ್ಯದರ್ಶಿ ಟಿ.ಎಸ್.ವೇಣುಗೋಪಾಲ್ ಸ್ವಾಗತಿಸಿ, ಸಿ.ಡಿ.ಎಸ್.ಅಧ್ಯಕ್ಷೆ ಜ್ಯೋತಿ ಪ್ರಭಾ ವಂದಿಸಿದರು.