ಪೆರ್ಲ:ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವ, ಮಹಾ ರುದ್ರಾಬಿಷೇಕ, ಮಹಾ ರುದ್ರಯಾಗ ಫೆ.1ರಿಂದ 5ರ ವರೆಗೆ ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಶನಿವಾರ ಶ್ರೀಕ್ಷೇತ್ರದಲ್ಲಿ ನಡೆಯಿತು.
ದೇವಳದ ಪ್ರಧಾನ ಅರ್ಚಕ ಮಧುಸೂದನ್ ಪುಣಿಂಚತ್ತಾಯ, ಶ್ರೀಧರ ಭಟ್ ಸಜಂಗದ್ದೆ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಗೊಳಿಸಿದರು. ದೇವಳದ ಆಡಳಿತ ಸಮಿತಿ ಗೌರವಾಧ್ಯಕ್ಷ ಟಿ.ಆರ್.ಕೆ.ಭಟ್ ಪೆರ್ಲ,ಅಧ್ಯಕ್ಷ ಎ.ವಿ.ಟಿ.ಪೆÇದುವಾಳ್, ಪ್ರಧಾನ ಕಾರ್ಯದರ್ಶಿ ಸದಾನಂದ ರೈ ಕುದ್ವ, ಉಪಾಧ್ಯಕ್ಷ ರಮಾನಾಥ ರೈ ಕಡಾರು, ವಿಷ್ಣುಭಟ್ ಕುಂಚಿನಡ್ಕ, ಜೊತೆ ಕಾರ್ಯದರ್ಶಿ ಶ್ರೀಕೃಷ್ಣ ಭಟ್ 'ಅನುಪಮಾ' ಪೆರ್ಲ, ಮೋಹನ ಆಚಾರ್ಯ ಪೆರ್ಲ, ರಾಜಾರಾಂ ಬಾಳಿಗ, ಪ್ರಕಾಶ್ ಶೆಟ್ಟಿ ಕುದ್ವ, ಕುಂಞÂರಾಮ ಮಣಿಯಾಣಿ ಅಮೆಕ್ಕಳ, ಮೋಹಿನಿ ಜೆ.ಆಳ್ವ, ಸುಂದರಿ ಕುದ್ವ, ಸತೀಶ್ ಶೆಟ್ಟಿ ಅಮೆಕ್ಕಳ, ಸತೀಶ್ ರೈ ಕುದ್ವ, ಗೋವಿಂದ ಉಕ್ಲಾಡಿ, ಪದ್ಮನಾಭ ಸಪರ್ಂಗಳ, ಮನಮೋಹನ ಬಜಕೂಡ್ಲು, ವಿಷ್ಣುಮೂರ್ತಿ ಯುವಕ ಸಂಘ, ಉಳ್ಳಾಲ್ತಿ ಮಹಿಳಾ ಸಂಘ ಸದಸ್ಯರು ಉಪಸ್ಥಿತರಿದ್ದರು.