ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಮಟ್ಟದಲ್ಲಿ ನಡೆದ ಕೇರಳೋತ್ಸವ ಸಮಾಪ್ತಿಗೊಂಡಿದೆ. ಈ ಸಂಬಂಧ ನಡೆದ ಸ್ಪರ್ಧೆಗಳಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿ ಸವಾರ್ಂಗೀಣ ಚಾಂಪಿಯನ್ ಶಿಪ್ ಪಡೆದಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತಿ ರನ್ನರ್ಸ್ ಅಪ್ ಆಗಿದೆ. ತಾಹಿರ ಟೀಚರ್ ಪೈವಳಿಕೆ ಅವರನ್ನು "ಕಲಾಪ್ರತಿಭೆ" ಯಾಗಿ ಘೋಷಿಸಲಾಗಿದೆ. ಕಳೆದ 5 ದಿನಗಳಿಂದ ಮಂಜೇಶ್ವರ, ಮಂಗಲ್ಪಾಡಿ ಪಂಚಾಯತಿಗಳ ವಿವಿಧ ವಲಯಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆದಿದ್ದುವು. ಕಲಾಸ್ಪರ್ಧೆಗಳು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಮಂದಿರ ಗಿಳಿವಿಂಡುವಿನಲ್ಲಿ ನಡೆದವು.
ಸಮಾರೋಪ ಸಮಾರಂಭವನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮಹಮ್ಮದ್ ಮುಸ್ತಫ, ಸದಸ್ಯರಾದ ಹಸೀನಾ ಕೆ., ಪ್ರಸಾದ್ ರೈ, ಮಿಸ್‍ಬಾನ, ಕಾರ್ಯದರ್ಶಿ ಸುರೇಂದ್ರನ್, ಜನರಲ್ ಎಕ್ಸ್ ಟೆನ್ಶನ್ ಅಧಿಕಾರಿ ಮಧು ಮೊದಲಾದವರು ಉಪಸ್ಥಿತರಿದ್ದರು.