ಮುಳ್ಳೇರಿಯ: ವಿದ್ಯಾಲಯವು ಪ್ರತಿಭೆಯತ್ತ ಕಾರ್ಯಕ್ರಮದ ಅಂಗವಾಗಿ ಕುಂಟಾರು ಶಾಲೆಯ ವಿದ್ಯಾರ್ಥಿಗಳು ಪ್ರಸಿದ್ಧ ಕ್ರೀಡಾಪಟು ಪುಟ್ಟೋಜಿ ರಾವ್ ಇಡುವಂಡೆ ಅವರೊಂದಿಗೆ ಸಂವಾದ ನಡೆಸಿದರು.
ಕ್ರೀಡಾ ಜೀವನದ ಬಗ್ಗೆ ವಿದ್ಯಾರ್ಥಿಗಳಲ್ಲಿ ತಮ್ಮ ಅನುಭವವನ್ನು ಅವರು ಹಂಚಿಕೊಂಡರು. ವಿದ್ಯಾರ್ಥಿ ಜೀವನದಲ್ಲಿ ಅವರು ಮಾಡಿದ ಉಪಜಿಲ್ಲಾ ಮತ್ತು ಜಿಲ್ಲಾ ಮಟ್ಟದ ಸಾಧನೆಗಳ ಬಗ್ಗೆ, ಅದಕ್ಕೆ ಪ್ರೇರಣೆ, ಪ್ರೋತ್ಸಾಹಗಳ ಬಗ್ಗೆ ತಿಳಿಸಿಕೊಟ್ಟರು. ಇಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಲಭಿಸುತ್ತಿರುವ ಪ್ರೋತ್ಸಾಹ, ಅವಕಾಶಗಳು ತಮ್ಮ ಎಳವೆಯಲ್ಲಿ ಲಭಿಸುತ್ತಿರಲಿಲ್ಲ. ಹಾಗಾಗಿ ಸಾಕಷ್ಟು ಪ್ರತಿಭೆಗಳು ಎಲೆಮರೆಯಲ್ಲಿಯೇ ಉಳಿಯುವಂತಾಯಿತು. ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಪುಟ್ಟೋಜಿ ರಾವ್ ಅವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪ್ರಶಾಂತ, ಶಿಕ್ಷಕರಾದ ನಯನ್ ಕುಮಾರ್, ವಿನೋದ್, ಬೀರಾನ್ ಉಪಸ್ಥಿತರಿದ್ದರು.