ಕಾಸರಗೋಡು: ತಪ್ಪು ಮಾಹಿತಿಗಳ ಹಿನ್ನೆಲೆಯಲ್ಲಿ ತಮ್ಮ ಮಕ್ಕಳಿಗೆ ರೋಗ ಪ್ರತಿರೋಧ ಚುಚ್ಚುಮದ್ದು ಹಾಕಿಸದೇ ಇರುವ ಹೆತ್ತವರಿಗೆ ವಿಚಾರದ ಸತ್ಯಾಸತ್ಯತೆಯ ಮನವರಿಕೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಕ್ಕಳಿಗೆ ಚುಚ್ಚುಮದ್ದು ಹಾಕಿಸುವಂತೆ ಮಾಡುವ ನಿಟ್ಟಿನಲ್ಲಿ `ಮಿಷನ್ ಆಫಿಯತ್' ಎಂಬ ವಿನೂತನ ಯೋಜನೆ ಆರಂಭಿಸಲಾಗಿದೆ.
ಮೊಗ್ರಾಲ್ ಪುತ್ತೂರು, ಚೆಂಗಳ ಗ್ರಾಮ ಪಂಚಾಯತ್‍ಗಳಲ್ಲಿ ಈ ಯೋಜನೆ ಆರಂಭಗೊಂಡಿದೆ. ಗ್ರಾಮ ಪಂಚಾಯತ್‍ಗಳ ಸಹಕಾರದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ಯೋಜನೆ ಜಾರಿಗೊಳಿಸುತ್ತಿವೆ. ಮಕ್ಕಳಿಗೆ ನೀಡಲಾಗುವ ರೋಗ ಪ್ರತಿರೋಧ ಚುಚ್ಚುಮದ್ದಿನಿಂದ ತಪ್ಪು ಕಲ್ಪನೆಗಳ ಹಿನ್ನೆಲೆಯಲ್ಲಿ ಮಾರು ದೂರ ಉಳಿಯುವ ಹೆತ್ತವರ ಸಂಖ್ಯೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೀಗೊಂದು ಯೋಜನೆ ಜಾರಿಗೊಳಿಸಲಾಗಿದೆ. ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ವರೆಗೆ ಒಂದೇ ಒಂದು ರೋಗ ಪ್ರತಿರೋಧ ಚುಚ್ಚುಮದ್ದು ಪಡೆಯದೇ ಇರುವ 12 ಮಕ್ಕಳು, ಅರ್ಧಾಂಶವಷ್ಟೇ ಪಡೆದಿರುವ 250 ಮಂದಿ ಮಕ್ಕಳು, ಮೊಗ್ರಾಲ್ ಪುತ್ತೂರಿನಲ್ಲಿ ಈ ವರೆಗೆ ಚುಚ್ಚುಮದ್ದು ಪಡೆಯದೇ ಇರುವ 105 ಮಂದಿ ಮಕ್ಕಳು ಇದ್ದಾರೆ ಎಂದು ಅಧಿಕೃತ ಗಣನೆಗಳು ತಿಳಿಸಿವೆ. ಇವರಿಗೆ ಚುಚ್ಚುಮದ್ದು ಕೊಡಿಸಿ ಈ ವಲಯದಲ್ಲಿ ಶೇ.100 ಫಲಿತಾಂಶ ಪಡೆಯುವ ಗುರಿ ಸಾ„ಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ.
ಏನಿದು ಮಿಷನ್ ಆಫಿಯತ್? :
ಆಫಿಯತ್ ಎಂದರೆ ಅರೆಬಿಕ್ ಭಾಷೆಯಲ್ಲಿ ಆರೋಗ್ಯ, ಸೌಖ್ಯ ಎಂದರ್ಥ. ಬಂದ್ಯೋಡು ಕೊಕ್ಕೆಚ್ಚಾಲ್, ಕುಂಬಳೆ ಇಮಾಂ ಶಾಫಿ ಅಕಾಡೆಮಿ ಕಾಲೇಜುಗಳ 40 ವಾಫಿ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಠ್ಯಪದ್ಧತಿಯ ಪ್ರಕಾರ ಇವರಿಗೆ 190 ತಾಸುಗಳ ಸಮಾಜ ಸೇವೆ ಕಡ್ಡಾಯ. ಮಿಷನ್ ಆಫಿಯತ್‍ಗಾಗಿ ಇವರು ಈ ಅವಕಾಶ ಬಳಸಿಕೊಳ್ಳುತ್ತಿದ್ದಾರೆ. ಇದರ ಅಂಗವಾಗಿ ಕಳೆದ ತಿಂಗಳು ಇವರಿಗೆ ಈ ಸಂಬಂಧ ಒಂದು ದಿನದ ತರಬೇತಿ ನೀಡಲಾಗಿತ್ತು. ಚೆಂಗಳ ವೈದ್ಯಾ„ಕಾರಿ ಡಾ.ಷಮೀಮಾ, ಮೊಗ್ರಾಲ್ ಪುತ್ತೂರು ವೈದ್ಯಾ„ಕಾರಿ ಡಾ.ನಾಸ್ಮಿನ್ ಜೆ. ನಝೀರ್, ಆರೋಗ್ಯ ಇನ್ಸ್‍ಪೆಕ್ಟರ್ ಬಿ.ಅಶ್ರಫ್, ಅಕ್ಕರ ಫವಂಡೇಶನ್ ಯೋಜನೆ ಪ್ರಬಂಧಕ ಯಾಸರ್ ಶಾಫಿ ಈ ತರಬೇತಿಗೆ ನೇತೃತ್ವ ವಹಿಸಿದ್ದರು.
ಚಟುವಟಿಕೆ ಹೇಗೆ ? :
ಈ ಗ್ರಾಮ ಪಂಚಾಯತ್‍ಗಳನ್ನು ಕೇಂದ್ರೀಕರಿಸಿ ಫೀಲ್ಡ್ ವರ್ಕ್‍ಗಾಗಿ ಗುಂಪು ರಚಿಸಿ ಚುಚ್ಚುಮದ್ದಿನ ಬಗ್ಗೆ ವಿರೋಧ ತೋರುವ ಹೆತ್ತವರನ್ನು ಮನೆಗಳಿಗೆ ಸಂದರ್ಶನ ನೀಡುವ ಈ ವಫಿ ವಿದ್ಯಾರ್ಥಿಗಳು ಅವರ ತಪ್ಪುಕಲ್ಪನೆಗಳನ್ನು ದೂರೀಕರಿಸುವರು. ಜನಪ್ರತಿನಿ„ಗಳು, ಜೆ.ಪಿ.ಎಚ್.ಎನ್.ಜೆ. ಎಚ್.ಐ., ಆಶಾ ಕಾರ್ಯಕರ್ತೆಯರು, ಇವರ ಜತೆಗಿರುವರು. ಚೆಂಗಳದಲ್ಲಿ 6 ಉಪಕೇಂದ್ರಗಳಿಗಾಗಿ 10 ತಂಡ, ಮೊಗ್ರಾಲ್ ಪುತ್ತೂರಿನಲ್ಲಿ 6 ತಂಡ ರಚಿಸಿ ಕ್ಷೇತ್ರಕ್ಕಿಳಿದಿದ್ದಾರೆ. ಈ ಮೂಲಕ ಮನವರಿಕೆ ಮಾಡಿಕೊಂಡ ಹೆತ್ತವರು ತತ್‍ಕ್ಷಣ ತಮ್ಮ ಮ್ಕಕಳ ಸಹಿತ ಸಮೀಪದ ಅಂಗನವಾಡಿಗಳಿಗೆ ತೆರಳಿ ವ್ಯಾಕ್ಸೀನ್ ಹಾಕಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಕೈ ಹೊತ್ತಗೆ ಸಿದ್ಧ :
ಈ ಯೋಜನೆ ಸಂಬಂಧ ಮಾಹಿತಿಯಿರುವ ಕೈ ಹೊತ್ತಗೆ ಗ್ರಾಮ ಪಂಚಾಯತ್‍ನ ಸಹಾಯದೊಂದಿಗೆ ಮುದ್ರಿಸಲಾಗಿದೆ. ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದ ಮಹಲ್ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ, ಮದ್ರಸಾ ಶಿಕ್ಷಕರು, ಧಾರ್ಮಿಕ ನೇತಾರರು ಈ ನಿಟ್ಟಿನಲ್ಲಿ ಸಭೆಗಳನ್ನೂ ನಡೆಸುವರು. ವಿಚಾರಸಂಕಿರಣ, ಕಾರ್ಯಾಗಾರ, ತರಗತಿಗಳೂ ಈ ನಿಟ್ಟಿನಲ್ಲಿ ಜರುಗಲಿವೆ. ಕುಟುಂಬ ಸಭೆಗಳು, ಜನಪರ ಕೂಟಗಳು, ಮನೆ ಮನೆ ಸಂದರ್ಶನ, ನೋಟೀಸು ವಿತರಣೆ, ಫ್ಲಾಷ್ ಮೊಬ್, ಸಾಕ್ಷ್ಯಚಿತ್ರ ಪ್ರದರ್ಶನ, ಮೆರವಣಿಗೆ, ಬೀದಿನಾಟಕ ಇತ್ಯಾದಿ ಸುಮಾರು 50 ಕಾರ್ಯಕ್ರಮಗಳೂ ಈ ನಿಟ್ಟಿನಲ್ಲಿ ನಡೆಯಲಿವೆ.
ವೈದ್ಯಾಧಿಕಾರಿಗಳು ಯೋಜನೆಯ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದಾರೆ. ಆರೋಗ್ಯ ಇನ್ಸ್‍ಪೆಕ್ಟರ್ ಯೋಜನೆ ಸಂಚಾಲಕರಾಗಿ, ಪಿ.ಎಚ್.ಎನ್.ಕೌನ್ಸಿಲರ್, ಪಿ.ಎಚ್.ಎನ್. ವಾಲಿಂಟಿಯರ್ ಸೂಪರ್ ವೈಸರ್‍ಗಳು ಕೆ.ಎಚ್.ಐ. ಮೀಡಿಯಾ, ದಾಖಲೀಕರಣ ಇತ್ಯಾದಿ ಹೊಣೆಯನ್ನು ಯೋಜನೆಯ ಅಂಗವಾಗಿ ವಹಿಸುವರು. ಈ ಸಂಬಂಧ ಚೆಂಗಳದಲ್ಲಿ ನಡೆದ ಮನೆಮನೆ ಸಂದರ್ಶನಕ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ನಾಸರ್ ಕಾಟುಕೊಚ್ಚಿ, ಸದಾನಂದನ್, ವೈದ್ಯಾ„ಕಾರಿ ಡಾ.ಷಮೀಮಾ ತನ್ವೀರ್, ಆರೋಗ್ಯ ಇನ್ಸ್‍ಪೆಕ್ಟರ್ ಬಿ.ಅಶ್ರಫ್, ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್‍ರಾದ ಆಫೀಝ್ ಶಾಫಿ, ಕೆ.ಎಸ್.ರಾಜೇಶ್, ಆಸಿಫ್ , ಜೆ.ಪಿ.ಎಚ್.ಎನ್. ಗಳಾದ ಜಲಜಾ, ಕೊಚ್ಚುರಾಣಿ, ನಿಷಾ, ಸಬೀನಾ, ಮಂಜೂಷಾ ನೇತೃತ್ವ ವಹಿಸಿದ್ದರು.