ಮಂಜೇಶ್ವರ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ನಿರ್ಮಾಣ ಯೋಜನೆಗೆ ಜನವರಿ ತಿಂಗಳಲ್ಲಿ ಶಿಲಾನ್ಯಾಸ ನಡೆಸಲು ತೀರ್ಮಾನಿಸಿದ್ದು ಆ ಬಗೆಗಿನ ಪೂರ್ವ ತಯಾರಿ ಸಭೆ ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಅಧ್ಯಕ್ಷತೆಯಲ್ಲಿ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಸಭೆಯಲ್ಲಿ ವೆಂಕಪ್ಪಯ್ಯ ಸಾಂಸ್ಕøತಿಕ ಭವನ ನಿರ್ಮಾಣ ವಿವಿಧ ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ ಕಾವು ಮಠ, ಸತೀಶ ಅಡಪ ಸಂಕಬೈಲು, ಜಯರಾಮ ರೈ ಸಿರಿಬಾಗಿಲು, ಸುಬ್ರಹ್ಮಣ್ಯ ಹೊಳ್ಳ ಮುಳಿಯಾರು, ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ಜಗದೀಶ್ ಕೂಡ್ಲು, ಶಿವರಾಮ ಕಾಸರಗೋಡು, ಗುರುಪ್ರಸಾದ ಹೊಳ್ಳ ತಿಂಬರ, ತಿಮ್ಮಪ್ಪ ಮಜಲು ಭಾಗವಹಿಸಿದ್ದರು. ಸತೀಶ ಅಡಪ ಸಂಕಬೈಲು ಸಭೆ ನಿರ್ವಹಿಸಿದರು.