ಕುಂಬಳೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ನಡೆಸಲಾದ ವಿದ್ಯಾಲಯ ಪ್ರತಿಭೆಗಳೊಂದಿಗೆ ಕಾರ್ಯಕ್ರಮವು ನಾರಾಯಣಮಂಗಲ ಶಾಲೆಯಲ್ಲಿ ಮುಕ್ತಾಯಗೊಂಡಿತು. 4 ಮಂದಿ ಊರಿನ ಪ್ರತಿಭೆಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು. ನಾಟಿ ವೈದ್ಯ ವಿಶ್ವನಾಥ ಕಬೆಕ್ಕೋಡು, ನೇಕಾರ ನಾರಾಯಣ ಶೆಟ್ಟಿ, ಕೃಷಿಕರುಗಳಾದ ಜಯಪ್ರಸಾದ್, ಲಕ್ಷ್ಮೀನಾರಾಯಣ ಭಟ್ ಕಬೆಕ್ಕೋಡು ಇವರ ಮನೆಗೆ ತೆರಳಿ ಅವರ ಅನುಭವಗಳ ಪಾಠವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಶಾಲೆಯ ಅಧ್ಯಾಪಕರು ವಿದ್ಯಾರ್ಥಿಗಳ ಜೊತೆಗಿದ್ದರು. ಪ್ರಶ್ನೆ ಮತ್ತು ಸಂವಾದಗಳನ್ನು ನಡೆಸಿ ಮಾಹಿತಿಯನ್ನು ಪಡೆದುಕೊಂಡರು. ಪ್ರತಿಭೆಗಳು ತಮ್ಮ ವೃತ್ತಿಯ ಕುರಿತಾಗಿಯೂ, ವೃತ್ತಿಯಲ್ಲಿನ ಅನುಭವದ ಕುರಿತು, ಸವಿಶೇಷಗಳ ಕುರಿತು ತಿಳಿಸಿದರು. ಮುಂದಿನ ಜನಾಂಗದ ಮಕ್ಕಳಿಗೆ ಕೆಲವು ಕಿವಿ ಮಾತನ್ನೂ ಸಂದೇಶವನ್ನೂ ನೀಡಿದರು.
ನಾರಾಯಣಮಂಗಲ ಶಾಲೆಯಲ್ಲಿ `ವಿದ್ಯಾಲಯ ಪ್ರತಿಭೆಗಳೊಂದಿಗೆ' ಚಟುವಟಿಕೆ ಮುಕ್ತಾಯ
0
ಡಿಸೆಂಬರ್ 02, 2019