ಕಾಸರಗೋಡು: ವೀರ ಸೈನಿಕರ ಸ್ಮರಣೆಯೊಂದಿಗೆ ಜಿಲ್ಲೆಯಲ್ಲಿ ಶಸಸ್ತ್ರ ಸೇನೆ ಧ್ವಜ ದಿನಾಚರಣೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾರ್ಗಿಲ್ ಸ್ಮಾರಕದಲ್ಲಿ ಪುಷ್ಪಾರ್ಚನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾರಂಭ ಜರುಗಿತು. ಸಹಾಯಕ ಜಿಲ್ಲಾಧಿಕಾರಿ ಟಿ.ಆರ್.ಅಹಮ್ಮದ್ ಉದ್ಘಾಟಿಸಿದರು. ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಬ್ರಿಗೇಡಿಯರ್ ಟಿ.ಸಿ.ಅಬ್ರಾಹಂ ಅಧ್ಯಕ್ಷತೆ ವಹಿಸಿದ್ದರು. ಇ.ಸಿ.ಎಚ್.ಎಸ್. ಪಾಲಿ ಕ್ಲಿನಿಕ್ ಒ.ಐ.ಸಿ. ಬ್ರಿಗೇಡಿಯರ್ ಕೆ.ಎನ್.ಪಿ.ನಾಯರ್ ಧ್ವಜ ದಿನಾಚರಣೆಯ ಸಂದೇಶ ನೀಡಿದರು.
ಎಸ್.ಎಸ್.ಎಲ್.ಸಿ., ಪ್ಲಸ್ ಟು ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸಿದ ಮಕ್ಕಳಿಗೆ ಅಭಿನಂದನೆ ನಡೆಯಿತು. ನಂತರ ಜನಜಾಗೃತಿ ಕಾರ್ಯಕ್ರಮ, ವಿಚಾರಸಂಕಿರಣ ಜರುಗಿತು. ಮೇಜರ್ ಕೆ.ಪ್ರದೀಪನ್, ಕಾಸರಗೊಡು ಕೆ.ಎಸ್.ಇ.ಎಸ್.ಎನ್.ಅಧ್ಯಕ್ಷ ಕೆ.ನಾರಾಯಣನ್ ನಾಯರ್, ಕಾಸರಗೋಡು ಏರ್ ಫೆÇೀರ್ಸ್ ಅಸೊಸಿಯೇಶನ್ ಅಧ್ಯಕ್ಷ ನಿವೃತ್ತ ಸ್ಕ್ವಾಡ್ ಲೀಡರ್ ಎಂ.ಕೃಷ್ಣನ್ ನಾಯರ್, ಅಖಿಲ ಭಾರತೀಯ ಪೂರ್ವ ಸೈನಿಕ ಸೇವಾ ಪರಿಷತ್ ಕಾರ್ಯದರ್ಶಿ ಕೆ.ಪಿ.ರಾಜನ್, ಎನ್.ಸಿ.ಸಿ.ಕೆಡೆಟ್ ಎ.ಹರ್ಷವರ್ಧನ್ ಉಪಸ್ಥಿತರಿದ್ದರು. ಜಿಲ್ಲಾ ಸೈನಿಕ ಕಲ್ಯಾಣ ಅ„ಕಾರಿ ಟಿ.ಕೆ.ರಾಜನ್ ಸ್ವಾಗತಿಸಿದರು. ಕಲ್ಯಾಣ ಅ„ಕಾರಿ ಪಿ.ಚಂದ್ರನ್ ವಂದಿಸಿದರು.