ನವದೆಹಲಿ: ಬಾಲಿವುಡ್ ನಟ ವಿದ್ಯಾ ಬಾಲನ್ ಅಭಿನಯಿಸಿರುವ ಗಣಿತ ಪ್ರತಿಭೆಯ 'ಶಕುಂತಲಾ ದೇವಿ ಜೀವನಚರಿತ್ರೆ ಆಧಾರಿತ ಚಲನಚಿತ್ರ 2020 ರ ಮೇ 8 ರಂದು ತೆರೆಗೆ ಬರಲಿದೆ
ವಿದ್ಯಾಬಾಲನ್ ಗುರುವಾರ ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಶಕುಂತಲಾದೇವಿಯ ಬುದ್ಧಿ, ಮೋಡಿ ಮತ್ತು ಸಹಜ ಪ್ರತಿಭೆಗಳಿಂದ ಆಕರ್ಷಿತರಾಗಲು ಸಿದ್ಧರಾಗಿ! ಶಕುಂತಲಾದೇವಿ ನಿಮ್ಮ ಹತ್ತಿರ ಚಿತ್ರಮಂದಿರಗಳಿಗೆ ಯಾವಾಗ ಬರುತ್ತಾರೆ ಎಂದು ತಿಳಿಯಲು ವೀಡಿಯೊ ನೋಡಿ!" ಎಂದು ಬರೆದುಕೊಂಡಿರುವುದರ ಜತೆಗೆ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ
ಅನು ಮೆನನ್ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್ ಮಾನವ ಕಂಪ್ಯೂಟರ್ ಎಂದು ಕರೆಯಲ್ಪಡುವ ಮಾನಸಿಕ ಕ್ಯಾಲ್ಕುಲೇಟರ್ ಶಕುಂತಲಾ ದೇವಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಪಿಟಿಐಗೆ ನೀಡಿದ್ದ ಸಂದರ್ಶನವೊಂದರಲ್ಲಿ ವಿದ್ಯಾ ಬಾಲನ್ ಶಕುಂತಲಾ ದೇವಿಯಾಗಿ ತಾನು ಕಾಣಿಸಿಕೊಳ್ಳುತ್ತಿರುವುದು ಸಂಸ್ತಸ ತಂದಿದೆ, ಆಕೆ ನಿಜಕ್ಕೂ ಬಲವಾದ ಸ್ತ್ರೀಸಮಾನತಾವಾದಿ ಧ್ವನಿಯನ್ನು ಹೊಂದಿದ್ದರು. ಯಶಸ್ಸಿನ ಪರಾಕಾಷ್ಠೆಯನ್ನು ತಲುಪುವುದಕ್ಕೆ ಹಲವರಿಗೆ ಮಾರ್ಗವನ್ನು ತೋರಿದರು.. ಆದರೆ ನನ್ನನ್ನು ನಿಜವಾಗಿಯೂ ಆಕರ್ಷಿಸುವ ಸಂಗತಿಯೆಂದರೆ, ನೀವು ಸಾಮಾನ್ಯವಾಗಿ ಮಾಒಜಿನ ಸಾಂಗತಿಗಳನ್ನು ಯಾರೂ ಗಣಿತದೊಂದಿಗೆ ಸಂಯೋಜಿಸುವುದಿಲ್ಲ ಆದರೆ ಆಕೆ ಇದಕ್ಕೆ ತದ್ವಿರುದ್ಧವಾಗಿ ಎಲ್ಲವನ್ನೂ ಗಣಿತದ ಪರಿಧಿಯೊಳಗೆ ತಂದಿದ್ದಳು. ಆಕೆ ಈ ದೇಶದ ಅತ್ಯಂತ ಸ್ಪೂರ್ತಿದಾಯಕ ಮಹಿಳೆಯರಲ್ಲಿ ಒಬ್ಬಳು ಎಂದು ಹೇಳಿದ್ದರು.