ಕುಂಬಳೆ: ಮುಗು ಶ್ರೀಸುಬ್ರಾಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವದ ಅಂಗವಾಗಿ ಕಯ್ಯಾರ್ ಪೊನ್ನೆತ್ತೋಡಿನ ಮಹಿಳಾ ಯಕ್ಷಕೂಟ ತಂಡದವರಿಂದ ವಾಲಿಮೋಕ್ಷ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಚಂದ್ರಹಾಸ ಪೊನ್ನೆತ್ತೋಡು(ಭಾಗವತಿಕೆ), ಚೆಂಡೆ ಮದ್ದಳೆಯಲ್ಲಿ ಶಂಕರ ಕಾಮತ್ ಚೇವಾರು ಹಾಗೂ ರಾಜಾರಾಮ ಬಲ್ಲಾಳ್ ಚಿಪ್ಪಾರು ಪಾಲ್ಗೊಂಡು ಪ್ರಸಂಗ ಮುನ್ನಡೆಸಿದರು. ಮುಮ್ಮೇಳದಲ್ಲಿ ಅರುಣಾವತಿ ಪೊನ್ನೆತ್ತೀಡು(ವಾಲಿ), ರೇವತಿ ಟೀಚರ್ ಕೊಣಾಜೆ ಹಾಗೂ ಸುನಿತಾ ಟೀಚರ್ ಶಿರಿಯ(ಸುಗ್ರೀವ), ಯಶವಂತಿ ಮಂಡೆಕಾಪು(ಹನುಮಂತ), ಮೋಹಿನಿ ಕೊಪ್ಪಳ(ಶ್ರೀರಾಮ), ಯಶೋಧ ಕುಬಣೂರು(ತಾರೆ) ಪಾತ್ರಗಳಿಗೆ ಜೀವತುಂಬಿದರು.