ಕಾಸರಗೋಡು: ಪಂಚಾಯತ್ ಅವಗಣನೆಯನ್ನು ಪ್ರತಿಭಟಿಸಿ ಬದಿಯಡ್ಕ ಗ್ರಾಮ ಪಂಚಾಯತ್‍ನ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಜನಪ್ರತಿನಿಧಿಗಳಿಂದ ಜಿಲ್ಲಾ ಪಂಚಾಯತ್‍ನ ಎಲ್.ಎಸ್.ಜಿ.ಡಿ. ವಿಭಾಗದ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಯಿತು.
ಪಂಚಾಯತ್‍ನ ಲೋಕೋಪಯೋಗಿ ವಿಭಾಗದಲ್ಲಿ ಅಸಿಸ್ಟೆಂಟ್ ಎಂಜಿನಿಯರ್, ಓವರ್ ಸೀಯರ್ ಇಲ್ಲದಿರುವುದರಿಂದ ಬದಿಯಡ್ಕ ಗ್ರಾಮ ಪಂಚಾಯತ್‍ನಲ್ಲಿ ಲೋಕೋಪಯೋಗಿ ಕಾಮಗಾರಿಗಳು ಮೊಟಕುಗೊಳ್ಳುತ್ತಿದ್ದು, ಇದನ್ನು ಪ್ರತಿಭಟಿಸಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರೂ ಸಹಿತ ಜನ ಪ್ರತಿನಿಧಿಗಳು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಖಾಲಿ ಇರುವ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ನಡೆಸಬೇಕೆಂದು ಒತ್ತಾಯಿಸಿ ಆಯೋಜಿಸಿದ ಧರಣಿಯಲ್ಲಿ ಎಲ್ಲಾ 19 ಮಂದಿ ಸದಸ್ಯರೂ ಧರಣಿಯಲ್ಲಿ ಭಾಗವಹಿಸಿದ್ದರು. ಪಂಚಾಯತ್‍ನಲ್ಲಿ ಓರ್ವ ಅಸಿಸ್ಟೆಂಟ್ ಎಂಜಿನಿಯರ್, ಇಬ್ಬರು ಓವರ್‍ಸಿಯರ್‍ಗಳಿದ್ದರು. ಆದರೆ ಇದೀಗ ಯಾರೂ ಇಲ್ಲದೆ ಈ ಹುದ್ದೆಗಳು ಖಾಲಿಯಾಗಿವೆ. ಇದರಿಂದ ಪಂಚಾಯತ್‍ನ ಅಭಿವೃದ್ಧಿ ಮೊಟಕುಗೊಳ್ಳುತ್ತಿದೆ.