ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದುಬರುವ ಧನುಸಂಕ್ರಮಣ ಮಹೋತ್ಸವವು ಮಂಗಳವಾರ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆಯೊಂದಿಗೆ ಸಂಪನ್ನವಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ಸೋಮವಾರ ಬೆಳಗ್ಗೆ ಗಣಪತಿ ಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ, ಏಕಾದಶ ರುದ್ರಾಭಿಷೇಕ, ನವಕಾಭಿಷೇಕ, ತುಲಾಭಾರ ಸೇವೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಶ್ರೀ ಶಿವಲಿ ಉತ್ಸವ, ಅನ್ನಸಂತರ್ಪಣೆ ಹಾಗೂ ಸಂಜೆ ದೀಪಾರಾಧನೆ, ಗಂಗಾಧರ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ತಾಯಂಬಕ, ರಾತ್ರಿ ರಂಗಪೂಜೆ, ರಾತ್ರಿ ಶ್ರೀದೇವರ ಬಲಿ ಉತ್ಸವ, ಬೆಡಿಸೇವೆ ಜರಗಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ವಾಣಿ ಪ್ರಸಾದ್ ಕಬೆಕ್ಕೋಡು ಇವರ ಶಿಷ್ಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಪರಾಹ್ನ ಶ್ರೀ ಶಾರದಾಂಬಾ ಯಕ್ಷಗಾನ ಕಲಾಸಂಘ, ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ, ಸಂಜೆ ವೈಷ್ಣವಿ ನಾಟ್ಯಾಲಯ ಪುತ್ತೂರು ತಂಡದ ಸದಸ್ಯರ ಪ್ರಾಯೋಜಕತ್ವದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ನಿರ್ದೇಶನದಲ್ಲಿ `ನಾಟ್ಯಾಮೃತಮ್' ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಹಾಗೂ ರಾತ್ರಿ ಶಿವಶಕ್ತಿ ಪೆರಡಾಲ ಪ್ರಾಯೋಜಕತ್ವದಲ್ಲಿ ವಿದುಷಿ ನಿಶಿತಾ ಪುತ್ತೂರು ಮತ್ತು ಬಳಗದವರಿಂದ ಭರತನಾಟ್ಯ-ಕೂಚುಪುಡಿ ನೃತ್ಯ ನಡೆಯಿತು.