ಕಾಸರಗೋಡು: ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತವು ತನ್ನದೇ ಆದ ಕೊಡುಗೆಯನ್ನು ವಿಶ್ವಕ್ಕೆ ನೀಡಿದೆ. ಅದರಲ್ಲಿ ಚಂದ್ರಯಾನದಂತಹ ಸಾಹಸ ಅತ್ಯಪೂರ್ವವಾದದ್ದು ಎಂದು ಮುಂಬೈಯ ಟಾಟಾ ಬಾಹ್ಯಾಕಾಶ ಸಂಸ್ಥೆಯ ನಿವೃತ್ತ ವಿಜ್ಞಾನಿ ರಘುರಾಮ ರಾವ್ ಅಭಿಪ್ರಾಯ ಪಟ್ಟರು.
ಅವರು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಮಕ್ಕಳೊಂದಿಗಿನ ಸಂವಾದದಲ್ಲಿ ಮಾತನಾಡಿದರು.
ಕೂಡ್ಲು ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಅವರು ತನ್ನ ಶಾಲಾ ದಿನಗಳ ಅನುಭವಗಳನ್ನು ಮೆಲುಕು ಹಾಕಿದರು. ಮಕ್ಕಳು ಉಪಗ್ರಹಗಳ ಉಡ್ಡಾವಣೆ, ಚಾಂದ್ರಯಾನದ ಬಗ್ಗೆ ಸಂಶಯಗಳನ್ನು ಕೇಳಿದರು. ಮಕ್ಕಳ ಎಲ್ಲಾ ಸಂಶಯಗಳನ್ನು ನಿವಾರಿಸಿದರು. ಶಾಲೆಯ ವತಿಯಿಂದ ಫಲಪುಷ್ಪಗಳನ್ನಿತ್ತು, ಶಾಲು ಹೊದಿಸಿ ರಘುರಾಮ ರಾವ್ ಅವರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಕೆ.ಜಿ.ಶಾನುಭೋಗ್ ವಹಿಸಿದರು. ಎ.ಎಸ್.ರಾವ್, ಎ.ಬಿ.ರಾವ್, ಎಸ್.ಎನ್.ಶಾನುಭೋಗ್ ಮುಂತಾದವರು ಉಪಸ್ಥಿತರಿದ್ದರು. ಮುಖ್ಯೋಪಧ್ಯಾಯರಾದ ಶ್ರೀಹರಿ ಸ್ವಾಗತಿಸಿದರು. ಸ್ಟಾಫ್ ಸೆಕ್ರೆಟರಿ ನರಸಿಂಹ ಮಯ್ಯ ವಂದಿಸಿದರು.