ಕುಂಬಳೆ: ಮನುಷ್ಯನು ಭಾವಜೀವಿ. ಪ್ರತಿಯೊಬ್ಬನಲ್ಲೂ ಪ್ರತಿಭೆಯಿರುತ್ತದೆ. ಮನುಷ್ಯನ ಕಲಾಜೀವನ ಪರಿಪೂರ್ಣವಾಗಬೇಕಾದರೆ ಬೊಂಬೆಯಾಟ ಪರಿಜ್ಞಾನವೂ ಅಗತ್ಯ ಎಂದು ಖ್ಯಾತ ಯಕ್ಷಗಾನ ಕಲಾವಿದ ದಿವಾಣ ಶಿವಶಂಕರ ಭಟ್ ಹೇಳಿದರು.
`ಶಾಲೆಯತ್ತ ಬೊಂಬೆ ಚಿತ್ತ' ಅಭಿಯಾನವನ್ನು ಮೊಗ್ರಾಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ಕೆ. ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಟಿ.ಬಶೀರ್, ಗ್ರಾ.ಪಂ. ಸದಸ್ಯೆ ಪ್ರಮೀಳಾ ಮಜಲ್ ಶುಭ ಹಾರೈಸಿದರು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನೇತೃತ್ವದಲ್ಲಿ ಫೆÇೀಕ್‍ಲ್ಯಾಂಡ್ ತ್ರಿಕರಿಪುರ ಹಾಗೂ ಡೋರ್ಫ್ ಕೆಟಲ್ ಸಹಯೋಗದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಭವ್ಯಶ್ರೀ ಆರ್.ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಶೋಭಿತ ಯು.ಎನ್. ಸ್ವಾಗತಿಸಿ, ರೇಖಾ ಎಂ. ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ `ನರಕಾಸುರ ವಧೆ' ಯಕ್ಷಗಾನ ಬೊಂಬೆಯಾಟ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನೀಡಲಾಯಿತು. ಪ್ರಧಾನ ಸೂತ್ರಧಾರ ಕೆ.ವಿ.ರಮೇಶ ಕಾಸರಗೋಡು ಜೊತೆ ತಿರುಮಲೇಶ ಕೆ.ವಿ., ಭವ್ಯಶ್ರೀ ಆರ್.ಬಲ್ಲಾಳ್, ಅನೀಶ್ ಪಿಲಿಕುಂಜೆ, ಶೋಭಾ ಯು.ಆಚಾರ್ಯ ಸಹಸೂತ್ರಧಾರರಾಗಿ ಭಾಗವಹಿಸಿದರು.