HEALTH TIPS

ಏನಾಯ್ತು ಈ ವರ್ಷ - ಸಂಸತ್ತಿನಲ್ಲಿ ಅನುಮೋದನೆಗೊಂಡ ಪ್ರಮುಖ ಮಸೂದೆಗಳು

   
     2019ರಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಹಲವು ಮಹತ್ವಪೂರ್ಣ ಮಸೂದೆಗಳು ಸಂಸತ್ತಿನಲ್ಲಿ ಅನುಮೋದನೆಯಾಗಿವೆ. ಅವುಗಳಲ್ಲಿ ಪ್ರಮುಖವಾದವು ಯಾವುವು ನೋಡೋಣ ಬನ್ನಿ:
  1.ಜಮ್ಮು-ಕಾಶ್ಮೀರ ಮರು ವಿಂಗಡಣೆ ಮಸೂದೆ 2019: ಕಳೆದ ಆಗಸ್ಟ್ 5ರಂದು ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮರು ವಿಂಗಡಣೆ ಮಸೂದೆಯನ್ನು ಗೃಹ ಸಚಿವ ಅಮಿತಾ ಮಂಡಿಸಿದರು. ಜಮ್ಮು-ಕಾಶ್ಮೀರ ರಾಜ್ಯಗಳನ್ನು ಮರುವಿಂಗಡಣೆ ಮಾಡಿ ಜಮ್ಮು ಮತ್ತು ಕಾಶ್ಮೀರ ಎಂದು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವುದಾಗಿದೆ.
2. ಕಂಪೆನಿಗಳ(ತಿದ್ದುಪಡಿ)ಮಸೂದೆ 2019: ಕಳೆದ ಜುಲೈ 25ರಂದು ಲೋಕಸಭೆಯಲ್ಲಿ ಕಂಪೆನಿಗಳ(ತಿದ್ದುಪಡಿ)ಮಸೂದೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. 2013ರ ಕಂಪೆನಿ ಕಾಯ್ದೆಯ ತಿದ್ದುಪಡಿ ಇದಾಗಿದೆ.
3. ಮಸೂದೆ ಪುನರಾವರ್ತನೆ ಮತ್ತು ತಿದ್ದುಪಡಿ, 2019: ಈ ಮಸೂದೆಯನ್ನು ಕಳೆದ ಜುಲೈ 25ರಂದು ಕಾನೂನು ಮತ್ತು ನ್ಯಾಯ ಖಾತೆ ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆ 68 ಕಾಯ್ದೆಗಳನ್ನು ಒಟ್ಟಾರೆಯಾಗಿ ರದ್ದುಗೊಳಿಸಿ ಇತರ ಎರಡು ಕಾನೂನುಗಳಿಗೆ ಸಣ್ಣ ತಿದ್ದುಪಡಿಗಳನ್ನು ಮಾಡುತ್ತದೆ.
4. ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ, 2019: ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ, 2019 ಅನ್ನು ರಾಜ್ಯಸಭೆಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಜುಲೈ 24ರಂದು ಮಂಡಿಸಿದರು. ಈ ಮಸೂದೆಯು, 2016ರ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯನ್ನು ತಿದ್ದುಪಡಿ ಮಾಡುತ್ತದೆ. ಕಂಪನಿಗಳಲ್ಲಿ ಮತ್ತು ವ್ಯಕ್ತಿಗಳಲ್ಲಿ ದಿವಾಳಿತನವನ್ನು ಪರಿಹರಿಸಲು ಸಮಯೋಚಿತ ಪ್ರಕ್ರಿಯೆಯನ್ನು ಒದಗಿಸುತ್ತದೆ. ವ್ಯಕ್ತಿಗಳು ಅಥವಾ ಕಂಪನಿಗಳು ತಮ್ಮ ಬಾಕಿ ಇರುವ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಈ ಮಸೂದೆ ನೆರವಿಗೆ ಬರುತ್ತದೆ.
5.ಮಾಹಿತಿ ಹಕ್ಕು (ತಿದ್ದುಪಡಿ)ಕಾಯ್ದೆ: ಸಿಬ್ಬಂದಿ, ಪಿಂಚಣಿ ಖಾತೆ ಸಚಿವ ಜಿತೇಂದ್ರ ಸಿಂಗ್ ಕಳೆದ ಜುಲೈ 19ರಂದು ಲೋಕಸಭೆಯಲ್ಲಿ ಮಾಹಿತಿ ಹಕ್ಕು(ತಿದ್ದುಪಡಿ)ಕಾಯ್ದೆ ಮಂಡಿಸಿದರು. 2005ರ ಮಾಹಿತಿ ಹಕ್ಕು ಕಾಯ್ದೆಯ ತಿದ್ದುಪಡಿ ಇದಾಗಿದೆ.


6 ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ) ಮಸೂದೆ 2019: ಲೋಕಸಭೆಯಲ್ಲಿ ಜೂನ್ 24ರಂದು ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ)ಮಸೂದೆ 2019ನ್ನು ಮಂಡಿಸಿದರು. 2004ರ ಜಮ್ಮು-ಕಾಶ್ಮೀರ ಮೀಸಲಾತಿ ಕಾಯ್ದೆಯ ತಿದ್ದುಪಡಿ ಇದಾಗಿದೆ. ಮತ್ತು ಮಾರ್ಚ್ 1, 2019ರ ವಿಧೇಯಕದ ಸುಗ್ರೀವಾಜ್ಞೆ ಇದಾಗಿದೆ. ಈ ಕಾಯ್ದೆಯು ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ನೇಮಕಾತಿ ಮತ್ತು ಬಡ್ತಿಗಳಲ್ಲಿ ಮೀಸಲಾತಿ ಮತ್ತು ಕೆಲವು ಕಾಯ್ದಿರಿಸಿದ ವರ್ಗಗಳಿಗೆ ವೃತ್ತಿಪರ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸುತ್ತದೆ.


7. ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ, 2019: ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ, 2019 ಅನ್ನು ಲೋಕಸಭೆಯಲ್ಲಿ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್ ಅವರು ಮಂಡಿಸಿದರು. ಇದು ಫೆಬ್ರವರಿ 21, 2019 ರ ಸುಗ್ರೀವಾ ಜ್ಞೆ ಯ ಬದಲಾಗಿದೆ.


8. ತ್ರಿವಳಿ ತಲಾಖ್ ಮಸೂದೆ: ದೇಶದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದ್ದ ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕ ಉಭಯ ಸದನಗಳಲ್ಲಿ ಕಳೆದ ಜುಲೈ 30ರಂದು ಅಂಗೀಕಾರಗೊಂಡಿತು. ಸುದೀರ್ಘ ಚರ್ಚೆಯ ನಂತರ ತ್ರಿವಳಿ ತಲಾಖ್ ಮಸೂದೆಯನ್ನು ಅಂತಿಮವಾಗಿ ಮತಕ್ಕೆ ಹಾಕಿದಾಗ ಮಸೂದೆಯ ಪರ 99 ಹಾಗೂ ಮತ್ತು ವಿರುದ್ಧವಾಗಿ 84 ಮತಗಳು ಬಿದ್ದವು. ಈ ಮೂಲಕ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ ಕೊನೆಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಂತಾಗಿದೆ.


8 ಪೌರತ್ವ ತಿದ್ದುಪಡಿ ಕಾಯ್ದೆ 2019: ವಷಾರ್ಂತ್ಯಕ್ಕೆ ತೀವ್ರ ಸದ್ದು ಮಾಡಿ ವಿವಾದ ಎಬ್ಬಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ. ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಕೂಡ ಅನುಮೋದನೆ ಸಿಕ್ಕಿ ರಾಷ್ಟ್ರಪತಿಗಳು ಅಂಕಿತ ಹಾಕಿ ಕಾಯ್ದೆಯಾಗಿ ಜಾರಿಗೆ ಬಂದಿದೆ. ಭಾರತದ ನೆರೆಯ ರಾಷ್ಟ್ರಗಳು ಬಹುತೇಕ ಇಸ್ಲಾಂ ರಾಷ್ಟ್ರಗಳು. ಭಾರತದಿಂದ ವಲಸೆ ಹೋದ ಅನೇಕರು ನೆಲೆಸಿರುವುದು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್ ಮತ್ತು ಇಂಡೋನೇಷ್ಯಾದಲ್ಲೇ.

ಹೀಗೆ ವಲಸೆ ಹೋದವರ ಪೈಕಿ ಹಿಂದೂಗಳು ಸೇರಿ ಅನೇಕ ಧಾರ್ಮಿಕ ಅಲ್ಪ ಸಂಖ್ಯಾತರಿದ್ದಾರೆ. ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ನೆರೆ ರಾಷ್ಟ್ರದಲ್ಲಿ ಹಿಂಸೆ ಅನುಭವಿಸುತ್ತಿರುವ ಜನರಿಗೆ ಮತ್ತೆ ಭಾರತಕ್ಕೆ ಬಂದು ನೆಲೆಸಲು ಅವಕಾಶ ನೀಡುವ ಮಸೂದೆ ಇದಾಗಿದೆ.

9. ಎನ್ ಆರ್ ಸಿ ತಿದ್ದುಪಡಿ: ದೇಶಾದ್ಯಂತ ಕೇಂದ್ರ ಸರ್ಕಾರ ಎನ್ ಆರ್  ಸಿ ಜಾರಿಗೆ ತರಲು ನಿರ್ಧರಿಸಿರುವ ಬೆನ್ನಲ್ಲೇ ಈ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಅಲ್ಲದೇ ಇದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡಲಾಗಿರುವ ಮೀಸಲಾತಿಯನ್ನು ಮತ್ತೆ 10 ವರ್ಷಗಳಿಗೆ ಮುಂದುವರೆಸಲಾಗಿದೆ. ಈ ಮೀಸಲಾತಿ ಅವಧಿ ಜನವರಿ 25, 2020 ಕ್ಕೆ ಕೊನೆಯಾಗಲಿದ್ದು, ಸಂಪುಟ ಸಭೆಯಲ್ಲಿ 10 ವರ್ಷಗಳಿಗೆ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries