ಮುಳ್ಳೇರಿಯ: ಲೋಕಕಲ್ಯಾಣಾರ್ಥವಾಗಿ ವಲಯಮಟ್ಟದಲ್ಲಿ ನಡೆಸಿ ಬರುತ್ತಿರುವ ಪಕ್ಷ ಪ್ರದೋಷವು ಮುಳ್ಳೇರಿಯಾ ಮಂಡಲದ ಚಂದ್ರಗಿರಿ ವಲಯದ ಮುಳ್ಳೇರಿಯಾ ಅಡ್ಕ ಡಾ ಶಿವಕುಮಾರರ ಮನೆಯಲ್ಲಿ ರುದ್ರಾಭಿಷೇಕ-ಪೂಜಾ ಸಹಿತ ವೇದಮೂರ್ತಿ ಪಯ ಶ್ಯಾಮಕುಮಾರ ಭಟ್ ಅವರ ನೇತೃತ್ವದಲ್ಲಿ "ಗೃಹೇ ಗೃಹೇ ವೇದನಿನಾದಃ" ಸಹಿತ ವಲಯದ 19 ಮಂದಿ ರುದ್ರಾಧ್ಯಾಯಿಗಳೂ - ಬೆಂಗಳೂರು ನಿವಾಸಿ ಅಡ್ಕ ಪ್ರಕಾಶ ಭಟ್ ಅವರ ಉಪಸ್ಥಿತಿಯಲ್ಲಿ ಸೋಮವಾರ ನೆರವೇರಿತು. ಇದೇ ಸಂದರ್ಭದಲ್ಲಿ ಮಾತೆಯರಿಂದ ಕುಂಕುಮಾರ್ಚನೆ, ಸಾಮೂಹಿಕ ಶ್ರೀ ಲಕ್ಷ್ಮೀಕರಾವಲಂಬನ ಸ್ತೋತ್ರ ಪಠನ ಜರಗಿದವು. ಮನೆಯವರೂ-ವಲಯಾಧ್ಯಕ್ಷ ಮೀನಗದ್ದೆ ಸುಬ್ರಹ್ಮಣ್ಯ ಭಟ್, ವಲಯ ಕಾರ್ಯದರ್ಶಿ ಗಣೇಶ ಶರ್ಮಾ ಕುಂಜತ್ತೋಡಿ, ವೇದಮೂರ್ತಿ ಪಯ ಶ್ಯಾಮಕುಮಾರ ಭಟ್, ವೇದಮೂರ್ತಿ ಅಡ್ಕ ಪ್ರಕಾಶ ಭಟ್,ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ಮಧುರಕಾನನ ಗಣಪತಿ ಭಟ್ ಉಪಸ್ಥಿತರಿದ್ದು ಗೋಕರ್ಣದ ಅಶೋಕೆಯಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠಕ್ಕೆ ದೇವತಾ ಸನ್ನಿಧಿಯಲ್ಲಿ ಯಥಾಸಾಧ್ಯ ದೇಣಿಗೆ ಸಮರ್ಪಿಸಿದರು.
ಅಡ್ಕದಲ್ಲಿ ಪ್ರದೋಷಾಚರಣೆ
0
ಡಿಸೆಂಬರ್ 02, 2019