ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕಮಂಡಲದ ಪಳ್ಳತ್ತಡ್ಕ ವಲಯ ವಾರ್ಷಿಕೋತ್ಸವವು ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಜರಗಿತು. ಬೆಳಗ್ಗೆ ವಲಯ ಅಧ್ಯಕ್ಷ ಪರಮೇಶ್ವರ ಪೆರುಮುಂಡ ಧ್ವಜಾರೋಹಣಗೈದರು. ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಅವರ ನೇತೃತ್ವದಲ್ಲಿ ನಡೆದ ಗೋಪೂಜೆ, ಗಣಪತಿ ಹೋಮ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಪಠಣ, ಕುಂಕುಮಾರ್ಚನೆಯಲ್ಲಿ ವಲಯ ಸದಸ್ಯರು ಪಾಲ್ಗೊಂಡಿದ್ದರು. ಶ್ರೀಮಾತಾ ಹವ್ಯಕ ಭಜನ ಸಂಘದವರಿಂದ ಭಜನ ಸೇವೆ ಹಾಗೂ ವಲಯದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಪರಮೇಶ್ವರ ಪೆರುಮುಂಡ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಮುಖ್ಯ ಅತಿಥಿಗಳಾಗಿ ಮಾತನಾಡಿ ಶ್ರೀಮಠದ ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಪಳ್ಳತ್ತಡ್ಕ ವಲಯವು ಮಾದರಿಯಾದ ಕಾರ್ಯವನ್ನು ನಿರ್ವಹಿಸುತ್ತಿದೆ. ಗೋಕರ್ಣದ ಅಶೋಕೆಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ನಮ್ಮ ಅಭಿಮಾನವಾಗಿದೆ. ಇದರ ನಿರ್ಮಾಣ ಕಾರ್ಯಕ್ಕೆ ಎಲ್ಲರ ಸಹಕಾರ ಅತೀ ಅಗತ್ಯ ಎಂದು ಪ್ರಗತಿಯ ಕುರಿತು ವಿವರಿಸಿದರು. ಮಂಡಲ ಉಪಾಧ್ಯಕ್ಷ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಮಾತೃಪ್ರಧಾನೆ ಕುಸುಮ ಪೆರ್ಮುಖ, ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡೆಕ್ಕಾನ, ಆರೋಗ್ಯ ಮತ್ತು ಸಹಾಯ ವಿಭಾಗದ ಸರಳಿ ಮಹೇಶ, ಪಳ್ಳತ್ತಡ್ಕ ವಲಯ ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಗುರುಭಕ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಲಯದ ಹಿರಿಯ ಪಾಕತಜ್ಞರುಗಳಾದ ಪಳ್ಳತ್ತಡ್ಕ ರಾಮಕೃಷ್ಣ ಭಟ್ ಹಾಗೂ ಬಾಪುಮೂಲೆ ಸುಬ್ರಹ್ಮಣ್ಯ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರಮೂಲೆ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಸಾಮೂಹಿಕ ಶ್ರೀರಾಮತಾರಕ ಜಪ, ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಹಿರಿಯ ಪಾಕತಜ್ಞರಿಗೆ ಗೌರವಾರ್ಪಣೆ, ಸತ್ಯನಾರಾಯಣ ಪೂಜೆ, ಗೋಪೂಜೆ- ಪಳ್ಳತ್ತಡ್ಕ ವಲಯ ವಾರ್ಷಿಕೋತ್ಸವ ಸಂಪನ್ನ
0
ಡಿಸೆಂಬರ್ 16, 2019