ಮಧೂರು: ಕೂಡ್ಲಿನ ಅತಿ ಪುರಾತನ ಕ್ಷೇತ್ರವಾದ ಶಿವಮಂಗಲ ಶ್ರೀ ಸದಾಶಿವ ಕ್ಷೇತ್ರದ ಜೀರ್ಣೋದ್ಧಾರ ನಡೆಸುವ ನಿಟ್ಟಿನಲ್ಲಿ ಭಾನುವಾರ ಶ್ರೀಕ್ಷೇತ್ರದಲ್ಲಿ ನಡೆದ ಮಹಾಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಡಾ. ಕೆ ಕೆ ಶಾನುಭೋಗ್ ವಹಿಸಿದ್ದು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ನಾಗೇಂದ್ರ ಭಟ್ ಹಿತನುಡಿಗಳನ್ನಾಡಿದರು. ಸಭೆಯಲ್ಲಿ ಡಾ. ಬಿ ಎಸ್ ರಾವ್, ಡಾ ಅನಂತ ಕಾಮತ್, ಗ್ರಾ.ಪಂ.ಸದಸ್ಯ ಶ್ರೀಧರ ಹಾಗು ಲೀಲ ಸಮಾರಂಭಕ್ಕೆ ಶುಭ ಹಾರೈಸಿದರು. ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ರಕ್ಷಾಧಿಕಾರಿಗಳಾಗಿ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿ, ಗೌರವ ಅಧ್ಯಕ್ಷರಾಗಿ ಡಾ. ಕೆ ಕೆ ಶಾನುಭೋಗ್, ಅಧ್ಯಕ್ಷರಾಗಿ ಡಾ ಅನಂತ ಕಾಮತ್, ಕಾರ್ಯಾಧ್ಯಕ್ಷರಾಗಿ ಕೆ ಜಿ ಶಾನುಭೋಗ್, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಪ್ರಸಾದ್ ಕೂಡ್ಲು, ಕೋಶಾಧಿಕಾರಿಯಾಗಿ ಪ್ರಕಾಶ್ ಶೆಟ್ಟಿ, ಆಯ್ಕೆಗೊಂಡರು. ಮಾರ್ಗದರ್ಶಕ ಮಂಡಳಿಯಲ್ಲಿ ನಾಗೇಂದ್ರ ಭಟ್, ವಸಂತ ಪೈ ಬದಿಯಡ್ಕ, ಡಾ ಬಿ. ಎಸ್ ರಾವ್, ಸುರೇಶ್ ನೇಮಕಗೊಂಡರು. ಆರ್ಥಿಕ ಸಮಿತಿಯ ಅಧ್ಯಕ್ಷರಾಗಿ ವೇಣುಗೋಪಾಲ ಬಾಮ, ಪ್ರಧಾನ ಸಂಚಾಲಕರಾಗಿ ವೇಣುಗೋಪಾಲ ಅಡಿಗ, ನಿಮಾರ್ಣ ಸಮಿತಿಯ ಅಧ್ಯಕ್ಷರಾಗಿ ಜಯರಾಮ ರೈ ಪೆರಿಯಡ್ಕ, ಪ್ರಧಾನ ಸಂಚಾಲಕರಾಗಿ ಭಾನುಪ್ರಕಾಶ್ ಆಯ್ಕೆಗೊಂಡರು. ಬೆಳಗ್ಗೆ ಏಕಾದಶ ರುದ್ರಾಭಿಷೇಕ ಜರಗಿತು. ಬಳಿಕ ಸಾಮೂಹಿಕ ಪ್ರಾರ್ಥನೆ, ನೂರಾರು ಮನೆಗಳಿಂದ ಶಿವಮಂಗಲ ಕ್ಷೇತ್ರದ ಜೀರ್ಣೋದ್ಧಾರದ ಸಂಕಲ್ಪದೊಂದಿಗೆ ತಂದ ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಿತು. ಮಹಾಸಭೆಯಲ್ಲಿ ಕೆ ಜಿ ಶಾನುಭೋಗ್ ಸ್ವಾಗತಿಸಿ, ಪ್ರಕಾಶ್ ಶೆಟ್ಟಿ ವಂದಿಸಿದರು. ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.