ಬದಿಯಡ್ಕ: ಬದಿಯಡ್ಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ತಿರುವಿಳಕ್ ಮಹೋತ್ಸವ ಶುಕ್ರವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಆರಂಭಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಗ್ಗೆ 9.30ಕ್ಕೆ ಹಸಿರು ವಾಣಿ ಹೊರೆ ಕಾಣಿಕೆ ಮೆರವಣಿಗೆ, ಉಗ್ರಾಣ ತುಂಬಿಸುವ ಮುಹೂರ್ತ ನೆರವೇರಿತು. ಹೊರೆಕಾಣಿಕೆ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡರು.
ಇಂದು(ಡಿ.14ರಂದು) ಬೆಳಗ್ಗೆ 6ಕ್ಕೆ ಹಣಪತಿ ಹವನ, ವಿವಿಧ ಭಜನಾ ಸಂಘಗಳಿಂದ ಭಜನೆ, 11.15ಕ್ಕೆ ಧಾರ್ಮಿಕ ಸಭೆಯನ್ನು ಚಂದ್ರಹಾಸ ರೈ ಪೆರಡಾಲ ಗುತ್ತು ಅಧ್ಯಕ್ಷತೆಯಲ್ಲಿ ಉದ್ಯಮಿ ವಸಂತ ಪೈ ಬದಿಯಡ್ಕ ಉದ್ಘಾಟಿಸುವರು. ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಪೆರುಮುಂಡ ಶಂಕರ ನಾರಾಯಣ ಭಟ್, ತಿರುಪತಿ ಕುಮಾರ ಭಟ್ ಪೆರ್ಮುಖ, ಗೋಪಾಲ ಮಾಸ್ತರ್ ಬದಿಯಡ್ಕ ಪಾಲ್ಗೊಳ್ಳಲಿದ್ದಾರೆ. 12.30ಕ್ಕೆ ಶರಣಂ ವಿಳಿ, ಮಹಾಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 2 ರಿಂದ ಯಕ್ಷಗಾನ ತಾಳಮದ್ದಳೆ, 5.30 ರಿಂದ ನೃತ್ಯ ಸಂಭ್ರಮ, 6ಕ್ಕೆ ಪೆರಡಾಲ ಶ್ರೀ ಉದನೇಶ್ವರ ಸನ್ನಿ„ಯಿಂದ ಪಾಲಕೊಂಬು ಮೆರವಣಿಗೆ, ರಾತ್ರಿ 9ಕ್ಕೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ರುಕ್ಮಿಣಿ ಸ್ವಯಂವರ, ಗಜೇಂದ್ರ ಮೋಕ್ಷ, 11ಕ್ಕೆ ಪೂಜೆ, ತಾಯಂಬಕ, ತಿರುವಿಳಕ್, ಅಯ್ಯಪ್ಪನ್ ಪಾಟ್, ಪೆÇಲಿಪಾಟ್, 3.30 ಕ್ಕೆ ತಾಲಪೆÇ್ಪಲಿ, ಅಗ್ನಿಪೂಜೆ, ಅಯ್ಯಪ್ಪ - ವಾವರ ಯುದ್ಧ ನಡೆಯಲಿದೆ. ಈ ಸಂದರ್ಭದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.