HEALTH TIPS

ಎಂ ಆಧಾರ್- ಆಧಾರ್ ಮೊಬೈಲ್ ಆಪ್ ; ಹೊಸ ಆಯ್ಕೆಯೊಂದಿಗೆ ಬಳಕೆಗೆ ಮುಕ್ತ

   
      ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಐಒಎಸ್ ಮತ್ತು ಆಂಡ್ರಾಯ್ಡ ಸ್ಮಾರ್ಟ್‍ಫೆÇೀನ್‍ಗಳಿಗೆ ತನ್ನ ಎಂಆಧಾರ್ (mAadhaar) ಆಪ್ ಅನ್ನು ಪರಿಷ್ಕರಿಸಿ ಬಿಡುಗಡೆಗೊಳಿಸಿದೆ.. ಇದು ತನ್ನ ಬಳಕೆದಾರರಿಗೆ ಕೆಲವು ಹೊಸ ಫೀಚರ್‍ಗಳನ್ನು ಪರಿಚಯಿಸಿದ್ದು, ಗೂಗಲ್ ಪ್ಲೇ ಸ್ಟೋರ್‍ನಿಂದ ಅಥವಾ ಐಫೆÇೀನ್‍ಗಳಿಗೆ ಆಪಲ್ ಸ್ಟೋರ್‍ನಿಂದ ಇನ್‍ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಆಪ್ ನಲ್ಲಿ ಲಭ್ಯವಿರುವ ಸೇವೆಗಳ ವಿವರಗಳನ್ನೂ ನೀಡಲಾಗಿದೆ.
       ಬಳಕೆ ಹೇಗೆ?
    ಈ ಆಪ್‍ಗೆ ಲಾಗ್‍ಇನ್ ಆಗಬೇಕು ಮತ್ತು ನಿಮ್ಮ ಮೊಬೈಲ್ ನಂಬರ್‍ನ ವೆರಿಫಿಕೇಷನ್ ಗೊಳ್ಳಬೇಕು. ಇದನ್ನು ಮಾಡುವುದಕ್ಕಾಗಿ ನೀವು ಮೇಲ್ಬಾಗದ ಬ್ಯಾನರ್ ನಲ್ಲಿರುವ Register your Aadaar ನ್ನು ಕ್ಲಿಕ್ಕಿಸಬೇಕು. ಬಳಿಕ ಇದು ನಿಮ್ಮನ್ನು ಹೊಸ ಪೇಜ್‍ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದು ಮಾಡಬೇಕು. ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ಬಂದ ನಂತರ, ಅದನ್ನು ಆಪ್‍ನಲ್ಲಿ ಎಂಟರ್ ಮಾಡಬೇಕು. ಇದು ಪೂರ್ಣಗೊಂಡ ಬಳಿಕ ಆಪ್ ಲಿಂಕ್ ಕೆಲಸ ಪೂರ್ಣವಾಗುತ್ತದೆ. ಇದು ಪೂರ್ಣಗೊಂಡಿದೆ ಎಂಬುದನ್ನು ದೃಢೀಕರಿಸಲು ನಿಮ್ಮ ಸ್ಮಾರ್ಟ್ ಫೆÇೀನ್‍ನಲ್ಲಿ ಆಧಾರ್ ಕಾರ್ಡ್‍ನ ಅಧಿಕೃತ ಪ್ರತಿಯೊಂದು ಲಭ್ಯವಿರುತ್ತದೆ.
            ಬಹುಭಾಷಾ ಆಪ್:
    ಇಂಗ್ಲಿಷ್, ಹಿಂದಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ, ಪಂಜಾಬಿ, ಮರಾಠಿ, ಒಡಿಯಾ, ಅಸ್ಸಾಮೀಸ್ ಮತ್ತು ಬೆಂಗಾಲಿ ಹೀಗೆ 13 ಭಾಷೆಗಳು ಈ ಆಪ್‍ನಲ್ಲಿ ಉಪಲಬ್ಧವಿವೆ. ನಿಮ್ಮ ಇಚ್ಚೆಯ ಭಾಷೆಯನ್ನು ನೀವು ಆಯ್ದುಕೊಳ್ಳಬಹುದಾಗಿದೆ. ನೀವು ಕನ್ನಡ ಭಾಷೆಯನ್ನು ಆಯ್ದುಕೊಂಡು ಬಳಿಕ ಬೇರೆ ಭಾಷೆಗೆ ಬದಲಾಯಿಸಬಹುದಾಗಿದೆ.
        ಆಧಾರ್ ಕಳೆದ ಹೋದರೆ ಇಲ್ಲಿದೆ ಪರಿಹಾರ:
     ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಎಲ್ಲೋ ಕಳೆದುಹೋದರೆ ಈ ಹೊಸ ಎಂಆಧಾರ್ ಆಪ್‍ನಲ್ಲಿ ಹೊಸ ಆಧಾರ್ ಕಾರ್ಡ್‍ನ ಪ್ರತಿಗೆ ಮನವಿ ಮಾಡಬಹುದಾಗಿದೆ. ಆಪ್‍ನ ಮೊದಲ ಪೇಜ್‍ನಲ್ಲಿ Order Aadhaar Reprint ಆಯ್ಕೆ ಇದ್ದು, ಹೊಸ ಆರ್ಧಾ ಕಾರ್ಡ್ ಪ್ರಿಂಟ್ ಮಾಡಿಸಿಕೊಳ್ಳಬಹುದು.
      ನಿಮ್ಮ ಆಧಾರ್ ವಿವರಗಳನ್ನು ಇಲ್ಲಿ ನಮೂದು ಮಾಡಬೇಕು. ಇದಾದ ಅನಂತರ ನೀವು ಉಳಿದೆಲ್ಲಾ ವಿವರಗಳನ್ನು ಎಂಟರ್ ಮಾಡಬೇಕು. ಇದಕ್ಕೆ 50 ರೂ. ಮೊತ್ತವನ್ನು ಪಾವತಿಸಬೇಕಾಗಿದೆ. ಇದರಲ್ಲಿ ಸ್ಪೀಡ್ ಪೆÇೀಸ್ಟ್ ಚಾರ್ಜ್ ಮತ್ತು ಜಿಎಸ್‍ಟಿ ಒಳಗೊಂಡಿರುತ್ತದೆ. UIDAI ಪ್ರಿಂಟ್ ಆಗಿರುವ ಪ್ರತಿಯನ್ನು ನಿಮಗೆ ಪ್ರಿಂಟ್ ಮಾಡಿ ಸ್ಪೀಡ್ ಪೆÇೀಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ. ಇದು ಸುಮಾರು ಐದು ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ.
        ತಿದ್ದುಪಡಿಗೆ ಅವಕಾಶ:
    ಈಗಾಗಲೇ ನೀಡಲಾದ ಆಧಾರ್ ಕಾರ್ಡ್‍ನಲ್ಲಿ ಏನಾದರೂ ಮಾಹಿತಿಗಳು ಅಪ್‍ಡೇಟ್ ಆಗದೇ ಇದ್ದರೆ ಅಥವ ತಪ್ಪಾಗಿ ಮುದ್ರಣವಾಗಿದ್ದರೆ, ನೀವು ಈ ನೂತನ mAadhaar   ಆಪ್‍ನಲ್ಲಿ ತಿದ್ದಪಡಿಗೊಳಿಸುವುದಕ್ಕೆ ಅವಕಾಶ ನೀಡಲಾಗಿದೆ. ಉದಾ: ನಿಮ್ಮ ವಿಳಾಸ, ಮೇಲ್ ಮೊದಲಾದವುಗಳನ್ನು ಅಪ್‍ಡೇಟ್ ಮಾಡಿಕೊಳ್ಳಬಹುದಾಗಿದೆ.
         ಬಯೋ ಮೆಟ್ರಿಕ್ ಲಾಕ್:
    ಪ್ರೈವೆಸಿ/ಖಾಸಗಿತನಕ್ಕಾಗಿ ಬಯೋಮೆಟ್ರಿಕ್ಸ್ ಭದ್ರತೆಯನ್ನು ಒದಗಿಸಲಾಗುತ್ತದೆ. ನಿಮ್ಮ ಆಧಾರ್ ವಿವರವನ್ನು ಯಾರಿಗೂ ನೀಡಲು ಬಯಸದೇ ಇದ್ದಲ್ಲಿ ನೀವು ಸರಳವಾಗಿ ಆಪ್‍ನ ಮೈ ಆಧಾರ್ ವಿಭಾಗದಲ್ಲಿ ನಿಮ್ಮ ಆಧಾರ್ ವಿವರವನ್ನು ತಾತ್ಕಾಲಿಕವಾಗಿ ಲಾಕ್ ಮತ್ತು ಅನ್‍ಲಾಕ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
         ದೃಢೀಕರಣ ಮಾಹಿತಿ:
    ಒಂದು ವೇಳೆ ನಿಮ್ಮ ಆಧಾರ್ ವಿವರಗಳು ನಿಮ್ಮ ಕಣ್ತಪ್ಪಿನಿಂದ ಅಥವ ನಿಮಗೆ ಅರಿವಿಲ್ಲದೇ ಎಲ್ಲೋ ಬಳಕೆಯಾಗಿದೆ ಎಂದು ನಿಮ್ಮಲ್ಲಿ ಅನಿಸಿದರೆ ನೀವು ಎಂಆಧಾರ್ ಆಪ್ ತೆರಳಿ ಮತ್ತು ಮೈ ಆಧಾರ್ ವಿಭಾಗದಲ್ಲಿ  ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ನೀವು ಯಾವೆಲ್ಲಾ ದಿನಾಂಕದಂದು ನಿವು ಆಧಾರ್ ವಿವರಗಳನ್ನು ತೆರೆದು ನೋಡಿದ್ದೀರಿ ಎಂಬ ಎಲ್ಲಾ ಮಾಹಿತಿಯನ್ನು ಪಡೆಯಬಹುದು.
      3 ಪೆÇ್ರಫೈಲ್ ಸೇರಿಸಬಹುದು:
   ಮಲ್ಟಿ-ಪೆÇ್ರಫೈಲ್ ಸೇವೆಯು ಎಂಆಧಾರ್‍ನಲ್ಲಿ ಲಭ್ಯವುದೆ. ಒಂದೇ ಮೊಬೈಲ್ ಸಂಖ್ಯೆಯಲ್ಲಿ 3 ಆಧಾರ್ ಕಾರ್ಡ್‍ಗಳನ್ನು ತೆರೆಯಲಾಗಿದ್ದರೆ ಆ ಮೂರು ಆಧಾರ್ ಕಾರ್ಡ್‍ಗಳನ್ನು ಈ ಒಂದೇ ಆಪ್‍ನಲ್ಲಿ ದಾಖಲಿಸಬಹುದು. ಆದರೆ ಗರಿಷ್ಠ 3 ಕಾರ್ಡ್‍ಗಳನ್ನು ಮಾತ್ರ ಇಟ್ಟುಕೊಳ್ಳಬಹುದಾಗಿದೆ..
        ಗುರುತಾಗಿ ಬಳಸಿ:
    ರೈಲುಗಳಲ್ಲಿ ಅಥವ ಇತರ ಪ್ರಯಾಣಗಳಲ್ಲಿ ಗುರುತಿನ ಚೀಟಿಯನ್ನು ನಮ್ಮಿಂದ ದಾಖಲೆಯ ಸಲುವಾಗಿ ಅಪೇಕ್ಷಿಸಲಾಗುತ್ತದೆ. ಇಂತಹ ಕಡೆ ಎಂಆಧಾರ್ ಆಪ್ ಅನ್ನು ಬಳಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries