HEALTH TIPS

ಪೌರತ್ವ ಕಾಯ್ದೆ ತಿದ್ದುಪಡಿ- ಜಿಲ್ಲೆಯಲ್ಲಿ ಹರತಾಳ : ಜನಜೀವನ ಅಸ್ತವ್ಯಸ್ತ

   
      ಕಾಸರಗೋಡು/ಕುಂಬಳೆ/ಮಂಜೇಶ್ವರ/ಬದಿಯಡ್ಕ: ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಮಂಗಳವಾರ ರಾಜ್ಯ ವ್ಯಾಪಕವಾಗಿ ಸಂಯುಕ್ತ ಸಮಿತಿ ಕರೆ ನೀಡಿದ ಹರತಾಳದಿಂದ ಕಾಸರಗೋಡು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಎಸ್.ಡಿ.ಪಿ.ಐ, ವೆಲ್ಪೇರ್ ಪಾರ್ಟಿ, ಬಿ.ಎಸ್.ಪಿ. ಮೊದಲಾದ ಸಂಘಟನೆಗಳ ಸಂಯುಕ್ತ ಸಮಿತಿ ಹರತಾಳಕ್ಕೆ ಕರೆ ನೀಡಿತ್ತು.
     ಹರತಾಳದ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳು, ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಪೂರ್ಣ ಮೊಟಕುಗೊಂಡಿತ್ತು. ಮಂಗಳವಾರ ಬೆಳಗ್ಗೆ ಕೇರಳ ಕೆ.ಎಸ್.ಆರ್.ಟಿ.ಸಿ. ಯ ಕೆಲವೊಂದು ಬಸ್‍ಗಳು ಪೆÇಲೀಸ್ ಬೆಂಗಾವಲಿನಲ್ಲಿ ಕಾಂಞಂಗಾಡ್, ಪಯ್ಯನ್ಯೂರಿಗೆ ಸರ್ವೀಸ್ ನಡೆಸಿತ್ತು. ಆ ಬಳಿಕ ನಿಲುಗಡೆಗೊಂಡಿತು. ಕಾಸರಗೋಡಿನಲ್ಲಿ ಖಾಸಗಿ ವಾಹನಗಳು ಯಾವುದೇ ಅಡ್ಡಿಯಿಲ್ಲದೆ ಸಂಚರಿಸಿತು. ಆಟೋ ರಿಕ್ಷಾ, ದ್ವಿಚಕ್ರ ವಾಹನಗಳು, ಕಾರು ಮೊದಲಾದವು ಸಂಚಾರ ನಡೆಸಿವೆ. ಸರಕು ಲಾರಿಗಳನ್ನು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ನಿಲುಗಡೆಗೊಳಿಸಲಾಗಿದೆ. ಕಾಂಞಂಗಾಡ್‍ನಲ್ಲಿ ಖಾಸಗಿ ಬಸ್‍ಗಳು ಸರ್ವೀಸ್ ನಡೆಸಿವೆ. ಬೆಳಗ್ಗೆ ಆರು ಗಂಟೆಗೆ ಆರಂಭಗೊಂಡ ಹರತಾಳ ಸಂಜೆ ಆರು ಗಂಟೆಯ ವರೆಗೆ ಹರತಾಳ ನಡೆಯಿತು.
      ಶಾಲೆಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸಿತು. ಹರತಾಳ ಘೋಷಿಸಿದ್ದರೂ ಶಾಲೆಗಳಲ್ಲಿ ಪರೀಕ್ಷೆಗೆ ಸಂಬಂಧಿಸಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸಾರ್ವಜನಿಕ ವಿದ್ಯಾಭ್ಯಾಸ ನಿರ್ದೇಶಕ ಕೆ.ಜೀವನ್‍ಬಾಬು ಅವರು ಶಾಲಾ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದ್ದರು.
  ಕಾಸರಗೋಡಿನಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಆದರೆ ಕಾಂಞಂಗಾಡ್‍ನಲ್ಲಿ ಭಾಗಿಕವಾಗಿ ತೆರೆದಿತ್ತು. ಕೆಲವೊಂದು ಕಡೆ ವಾಹನಗಳಿಗೆ ತಡೆ ನಡೆದಿದ್ದರೂ, ಪೆÇಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ ಹಿನ್ನೆಲೆಯಲ್ಲಿ ಹರತಾಳ ಬಹುತೇಕ ಶಾಂತಿಯುತವಾಗಿತ್ತು. ಇದೇ ವೇಳೆ ಮಾಯಿಪ್ಪಾಡಿಯಲ್ಲಿ ಕೆಲವು ಮನೆಗಳಿಗೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಡೆದಿದೆ.
     ಪ್ರತಿಭಟನೆ ಮೆರವಣಿಗೆ : ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಸಂಯುಕ್ತ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಯಿತು.
ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಿಸಿದ ಮೆರವಣಿಗೆ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಗೆ ಎಸ್‍ಡಿಪಿಐ ನೇತಾರರಾದ ಎನ್.ಯು.ಅಬ್ದುಲ್ ಸಲಾಂ, ಖಾದರ್ ಅರಫ, ವೆಲೇರ್ ಪಾರ್ಟಿ ನೇತಾರರಾದ ಮುಹಮ್ಮದ್ ವಡಕ್ಕೆಕರ, ಅಂಬುಂಞÂ ತಲಕ್ಲಾಯಿ, ಪಿ.ಕೆ.ಅಬ್ದುಲ್ಲ, ಎಸ್‍ಡಿಟಿಯು ನೇತಾರ ಅಶ್ರಫ್ ಕೋಳಿಯಡ್ಕಂ, ಎಫ್‍ಐಟಿಯು ನೇತಾರ ಹಮೀದ್ ಕಕ್ಕಂಡಿ, ಸೋಲಿಡಾರಿಟಿ ನೇತಾರ ಸಿ.ಎ.ಯೂಸುಫ್, ಎಸ್.ಐ.ಒ. ನೇತಾರ ಎ.ಜಿ.ಜಾಸೀರ್, ಫ್ರಟೆನಿಟಿ ಮೂವ್‍ಮೆಂಟ್ ನೇತಾರ ಸಿರಾಜ್ ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು.
    ಮೀನು ಲಾರಿಗೆ ತಡೆ : ಹರತಾಳ ಬೆಂಬಲಿಗರು ಮೆರವಣಿಗೆಯ ಸಂದರ್ಭದಲ್ಲಿ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಮೀನಿನ ಲಾರಿಯನ್ನು ತಡೆದು ನಿಲ್ಲಿಸಿದರು. ಹರತಾಳ ಬೆಂಬಲಿಗರನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾಗ ಯುವಕನೋರ್ವ ಕಾಸರಗೋಡು ಟೌನ್ ಸಿ.ಐ. ಅಬ್ದುಲ್ ರಹೀಮ್ ಅವರ ಕಾಲರ್ ಹಿಡಿದೆಳೆದ ಘಟನೆ ನಡೆಯಿತು. ಈ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲು ಪೆÇಲೀಸರು ಯತ್ನಿಸಿದಾಗ ಇತರು ತಡೆದರು. ಈ ಸಂದರ್ಭದಲ್ಲಿ ಪೆÇಲೀಸರು ಬಲ ಪ್ರಯೋಗಿಸಿ ಕಾಲರ್ ಹಿಡಿದ ಯುವಕ ಸಹಿತ ಮೂವರನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
     91 ಮಂದಿ ವಿರುದ್ಧ ಕೇಸು ದಾಖಲು : ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಹರತಾಳಕ್ಕೆ ಮುನ್ನ ನಗರದಲ್ಲಿ ಮೆರವಣಿಗೆ ನಡೆಸಿದ ಸಂಯುಕ್ತ ಸಮಿತಿಯ ನೇತಾರರ ಸಹಿತ 91 ಮಂದಿ ವಿರುದ್ಧ ಕಾಸರಗೋಡು ನಗರ ಪೆÇಲೀಸರು ಕೇಸು ದಾಖಲಿಸಿದ್ದಾರೆ.
      ಎಸ್‍ಡಿಪಿಐ ಜಿಲ್ಲಾ ಅಧ್ಯಕ್ಷ ಎನ್.ಯು.ಅಬ್ದುಲ್ ಸಲಾಂ, ಸಕರಿಯಾ, ಗಫೂರ್, ಬಶೀರ್, ಮುಹಮ್ಮದ್ ಬಾವಿಕರೆ, ಸಮೀರ್ ತಳಂಗರೆ, ನೌಫಲ್ ಉಳಿಯತ್ತಡ್ಕ, ಸಿದ್ದಿಕ್ ಪೆರಿಯ, ಮುಸ್ತಫ ಸಹಿತ 91 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಐಪಿಸಿ 143, 145, 283, 149 ಪೆÇಲೀಸ್ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ.
       8 ಮಂದಿ ವಶಕ್ಕೆ : ಹರತಾಳದ ನೆಪದಲ್ಲಿ ಉಳಿಯತ್ತಡ್ಕದಲ್ಲಿ ವಾಹನ ತಡೆಗೆ ಯತ್ನಿಸಿದ ಎಂಟು ಮಂದಿಯನ್ನು ವಿದ್ಯಾನಗರ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಾರಾರ್ ಜೀ ಸ್ಮಾರಕಕ್ಕೆ ಹಾನಿ : ಹರತಾಳದ ಹಿನ್ನೆಲೆಯಲ್ಲಿ ತೃಕ್ಕರಿಪುರದಲ್ಲಿ ಬಿಜೆಪಿಯ ಮಾರಾರ್ ಜೀ ಸ್ಮಾರಕ ಮಂದಿರ ಕಚೇರಿಗೆ ಮಂಗಳವಾರ ಮುಂಜಾನೆ ಅಕ್ರಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಕಚೇರಿಯ ಬಾಗಿಲು ಮುರಿದು, ಅದರೊಳಗಿದ್ದ ಟಿವಿ, ಪೀಠೋಪಕರಣಗಳು ಇತ್ಯಾದಿಗಳನ್ನು ಧ್ವಂಸಗೊಳಿಸಲಾಗಿದೆ. ಇದರಿಂದ ಸಾವಿರಾರು ರೂ. ನಷ್ಟವಾಗಿದೆ. ಈ ಬಗ್ಗೆ ನೀಡಲಾದ ದೂರಿನಂತೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಇದೇ ಸ್ಮಾರಕವನ್ನು ಮೂರು ಬಾರಿ ಹಾನಿಗೊಳಿಸಲಾಗಿತ್ತು.
             ಪ್ರತಿಭಟನೆ ಮೆರವಣಿಗೆ :
      ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಸಂಯುಕ್ತ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ, ಉಪ್ಪಳ, ಕುಂಬಳೆ, ಬದಿಯಡ್ಕ, ಪೆರ್ಲ, ಮುಳ್ಳೇರಿಯ ಮೊದಲಾದೆಡೆಗಳಲ್ಲಿ  ಮೆರವಣಿಗೆ ನಡೆಯಿತು.
     ಅನುಮತಿ ರಹಿತ ಮೆರವಣಿಗೆ :
     ಹರತಾಳಕ್ಕೆ ಬೆಂಬಲ ನೀಡಿ ಅನುಮತಿ ರಹಿತ ಮೆರವಣಿಗೆ ನಡೆಸಿದ 20 ಮಂದಿ ವಿರುದ್ಧ ಬದಿಯಡ್ಕ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಸಿದ್ದಿಕ್, ಮುಸ್ತಫ ಚಕ್ಕುಡಲ್, ಆಸಿಫ್ ಮೂಕಂಪಾರೆ, ಕರೀಂ ಕಾಡಮನೆ ಸಹಿತ 20 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಡಿ.16 ರಂದು ರಾತ್ರಿ ಬದಿಯಡ್ಕ ಪೇಟೆಯಲ್ಲಿ ಗುಂಪೆÇಂದು ಮೆರವಣಿಗೆ ನಡೆಸಿತ್ತು.
      ಆಂಶಿಕ ಪ್ರತಿಕ್ರಿಯೆ :
    ಬದಿಯಡ್ಕ, ಮುಳ್ಳೇರಿಯ, ಪೆರ್ಲ ಮೊದಲಾದೆಡೆಗಳಲ್ಲಿ ಹರತಾಳಕ್ಕೆ ಆಂಶಿಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪ್ರದೇಶಗಳಲ್ಲಿ ವ್ಯಾಪಾರ ಸಂಸ್ಥೆಗಳು ಆಂಶಿಕವಾಗಿ ತೆರೆದಿದೆ. ಖಾಸಗಿ ವಾಹನಗಳು, ಕೆಲವು ಆಟೋ ರಿಕ್ಷಾಗಳು ಸಂಚಾರ ನಡೆಸಿವೆ. ಆದರೆ ಬಸ್ ಸಂಚಾರವಿಲ್ಲದುದರಿಂದ ಜನ ಸಂಚಾರ ವಿರಳವಾಗಿತ್ತು. ಪೆರ್ಲದಲ್ಲಿ ಬಹುತೇಕ ಅಂಗಡಿಗಳು ತೆರೆದಿವೆ. ಆಟೋ ರಿಕ್ಷಾ, ಟ್ಯಾಕ್ಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿವೆ. ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಕೆಎಸ್‍ಆರ್‍ಟಿಸಿ ಬಸ್‍ಗಳು  ಸಂಚಾರ ಮೊಟಕುಗೊಳಿಸಿವೆ.
       ಮಂಜೇಶ್ವರ, ಉಪ್ಪಳ, ಕುಂಬಳೆ ಪೇಟೆಯಲ್ಲಿ ಹರತಾಳದಿಂದಾಗಿ ಯಾವುದೇ ಅಂಗಡಿಗಳು ತೆರೆಯಲಿಲ್ಲ. ಬಸ್‍ಗಳು ಓಡಾಟ ನಡೆಸಿಲ್ಲ. ಆದರೆ ಕೆಲವೊಂದು ಆಟೋ ರಿಕ್ಷಾಗಳು, ಕಾರುಗಳು, ಬೈಕ್‍ಗಳು ಸಂಚಾರ ನಡೆಸಿತು. ಹೊಸಂಗಡಿಯಲ್ಲಿ ಅಂಗಡಿ, ಹೊಟೇಲ್‍ಗಳು ಮುಚ್ಚಿವೆ. ಉಪ್ಪಳ, ಕುಂಬಳೆಯಲ್ಲೂ ಅಂಗಡಿಗಳು, ಹೊಟೇಲ್‍ಗಳು ಮುಚ್ಚಿವೆ. ಆಟೋ ರಿಕ್ಷಾಗಳು ಕುಂಬಳೆಯಲ್ಲಿ ಸಂಚಾರ ನಡೆಸಿತು.
   ಕುಂಬಳೆಯಲ್ಲಿ ಪ್ರತಿಭಟನೆ ನಡೆಸಿ, ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದ ವೆಲ್ಪೇರ್ ಪಾರ್ಟಿ ಹಾಗೂ ಎಸ್‍ಡಿಪಿಐ ಮುಖಂಡರಾದ ಅಬ್ದುಲ್ ಲತೀಫ್ ಕುಂಬಳೆ, ಮನ್ಸೂರ್, ಸರ್ಪ್‍ರಾಸ್, ಮುಸಾಂಬಿಲ್, ಝೈನುದ್ದೀನ್ ಸಹಿತ 10 ಮಂದಿಗಳನ್ನು ಬಂಧಿಸಿದ ಪೋಲೀಸರು, ಸಂಜೆ ಬಿಡುಗಡೆಗೊಳಿಸಿದರು. 
     ಉಪ್ಪಳ ಮೀನು ಮಾರುಕಟ್ಟೆಯಲ್ಲಿ ಮೀನು ಏಲಂ ನಡೆಸುತ್ತಿದ್ದ ಸ್ಥಳಕ್ಕೆ ತಲುಪಿದ ಹರತಾಳ ಬೆಂಬಲಿಗರು ಮೀನು ಏಲಂ ತಡೆಯಲು ಯತ್ನಿಸಿದರು. ಇದರಿಂದ ಕೆಲವು ಹೊತ್ತು ಉದ್ರಿಕ್ತ ಸ್ಥಿತಿಗೆ ಕಾರಣವಾಯಿತು. ಮಂಜೇಶ್ವರ ಸಿ.ಐ. ದಿನೇಶ್ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.
    ಚಿತ್ರ ಮಾಹಿತಿಗಳು:(1)(2)(3)(4)ಕಾಸರಗೋಡು ನಗರದ ವಿವಿಧಡೆಯ ಹರತಾಳದ ಪ್ರಭಾವಗಳು
  (5)(6)ಹರತಾಳದ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿರುವ ರಾ.ಹೆದ್ದಾರಿ ಮಂಜೇಶ್ವರದ ಹೊಸಂಗಡಿ,(7)(8)ಉಪ್ಪಳ ಪೇಟೆಯಲ್ಲಿ ಮಂಗಳವಾರ ಸಂಯುಕ್ತ ಸಮರ ಸಮಿತಿ ನಡೆಸಿದ ಮೆರವಣಿಗೆ.(9)(10)ಬಿಕೋ ಎನ್ನುತ್ತಿರುವ ಕುಂಬಳೆ ಪೇಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries