ಕಾಸರಗೋಡು: ರಾಜ್ಯದ ಐದು ಲಕ್ಷಕ್ಕೂ ಅಧಿಕವಿರುವ ತಲೆಹೊರೆ ಕಾರ್ಮಿಕರ ಕೆಲಸವನ್ನು ಇಲ್ಲದಂತೆ ಮಾಡಲು ಯತ್ನಿಸುತ್ತಿರುವ ಕ್ರಮದಿಂದ ಕೇರಳ ಸರ್ಕಾರ ಹಿಂದೆ ಸರಿಯಬೇಕು, ತಲೆಹೊರೆ ಕಾರ್ಮಿಕರನ್ನು ಆಯುಷ್ಮಾನ್ ಯೋಜನೆಯಲ್ಲಿ ಸೇರ್ಪಡೆಗೊಳಿಸಬೇಕು, ಕ್ಷೇಮ ಬೋರ್ಡ್‍ನ ಸೌಲಭ್ಯಗಳನ್ನು ಕಾಲಾನುಸಾರ ಪರಿಷ್ಕರಿಸಬೇಕು, ಪಿಂಚಣಿಯನ್ನು 5000 ರೂ.ಗೇರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಹೆಡ್ ಲೋಡ್ ಆ್ಯಂಡ್ ಜನರಲ್ ಮಜ್ದೂರ್ ಸಂಘ (ಬಿಎಂಎಸ್) ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಚೇರಿಗೆ ಜಾಥಾ ನಡೆಯಿತು.
ಜಾಥಾ ಮತ್ತು ಧರಣಿಯನ್ನು ಬಿಎಂಎಸ್ ರಾಜ್ಯ ಕಾರ್ಯದರ್ಶಿ ಇ.ದಿವಾಕರನ್ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕಚೇರಿಯ ಮುಂಭಾಗ ಧರಣಿ ನಡೆಯಿತು. ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಗೊಂಡ ಜಾಥಾ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ತಾಲೂಕು ಕಚೇರಿ ಪರಿಸರದಲ್ಲಿ ಸಂಪನ್ನಗೊಂಡಿತು.