ಮಂಜೇಶ್ವರ: ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಭೂತಬಲಿ ಉತ್ಸವವು ಡಿ.15 ರಿಂದ ಡಿ.17 ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ಡಿ.15 ರಂದು ಸಂಜೆ 6ಕ್ಕೆ ಪ್ರಾರ್ಥನೆ, ರಾತ್ರಿ 7 ಕ್ಕೆ ನಿತ್ಯ ಪೂಜೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ, ರಾತ್ರಿ 7.30ಕ್ಕೆ ಸಭಾ ಕಾರ್ಯಕ್ರಮ, 9 ಕ್ಕೆ ನೃತ್ಯೋಪಾಸನಂ-2019 ನಾಟ್ಯ ನಿಲಯಂ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯ ವೃಂದದವರಿಂದ ನೃತ್ಯ ಸಂಗಮ ನಡೆಯುವುದು. ಡಿ.16 ರಂದು ಬೆಳಗ್ಗೆ 6 ಕ್ಕೆ ಪ್ರಾತ:ಕಾಲ ಪೂಜೆ, 12.30ಕ್ಕೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ, ರಾತ್ರಿ 9ಕ್ಕೆ ಉದ್ಯಾವರ ಶ್ರೀ ಭಗವತಿ ಅಮ್ಮನವರ ಭೇಟಿ ಉತ್ಸವ, ರಾತ್ರಿ 12 ಕ್ಕೆ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಮಧ್ಯಾಹ್ನ 1.30ಕ್ಕೆ ಯಕ್ಷಗಾನ ತಾಳಮದ್ದಳೆ ಪ್ರಸಂಗ ಕೃಷ್ಣಾರ್ಜುನ ಕಾಳಗ, ಶ್ರೀ ಮಹಾಲಿಂಗೇಶ್ವರ ಕೃಪಾ ಪೆÇೀಷಿತ ಯಕ್ಷಗಾನ ಕಲಾ ಕೇಂದ್ರ ಮತ್ತು ಅಧ್ಯಯನ ಕೇಂದ್ರ ಕುಂಜತ್ತೂರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ, ರಾತ್ರಿ 7 ಕ್ಕೆ ನೃತ್ಯ ಸಂಗಮ ಸ್ಥಳಿಯ ಪ್ರತಿಭೆಗಳಿಂದ ನಡೆಯಲಿದೆ.
ಡಿ.17 ರಂದು ಬೆಳಗ್ಗೆ 10.30ಕ್ಕೆ ದರ್ಶನ ಬಲಿ ಹಾಗೂ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಬಟ್ಲು ಕಾಣಿಕೆ, ಮಹಾ ಪ್ರಸಾದ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ನಡೆಯುವುದು.