ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಷಷ್ಠೀ ಮಹೋತ್ಸವದ ಪಂಚಮೀ ಉತ್ಸವದ ಅಂಗವಾಗಿ ಭಾನುವಾರ ಶ್ರೀದೇವರ ದರ್ಶನಬಲಿ ದೇವಸ್ಥಾನದಲ್ಲಿ ಜರುಗಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಉತ್ಸವದಿ ಕಾರ್ಯಕ್ರಮ ಜರುಗುತ್ತಿದೆ.ಬೆಳಗ್ಗೆ ಉಷ:ಪೂಜೆ, ಗಣಪತಿಹೋಮ, ಉತ್ಸವ, ತುಲಾಭಾರ, ಪಲ್ಲಕ್ಕಿ ಉತ್ಸವ, ಬೀದಿಮಡೆಸ್ನಾನ ನಡೆಯಿತು.
ಡಿಸೆಂಬರ್ 2ರಂದು ಷಷ್ಠೀ ಮಹೋತ್ಸವ ಅಂಗವಾಗಿ ಬೆಳಗ್ಗೆ 11ಕ್ಕೆ ತುಲಾಭಾರಸೇವೆ, ಮಹಾಸಂತರ್ಪಣೆ, ಬೀದಿಮಡೆಸ್ನಾನ, ರಾತ್ರಿ 10ಕ್ಕೆ ಶ್ರೀದೇವರ ಭೂತಬಲಿ, ಭಂಡಾರಮನೆ ವನಕ್ಕೆ ಶ್ರೀದೇವರ ಸವಾರಿ, ಅಲ್ಲಿಂದ ಹಿಂದಿರುಗಿ ಬಂದ ನಂತರ ಸುಡುಮದ್ದು ಪ್ರದರ್ಶನ, ಉತ್ಸವ, ಶಯನ ನಡೆಯಲಿದೆ. ಡಿ. 3ರಂದು ಬೆಳಗ್ಗೆ 10.30ರಿಂದ ಆರಾಟುಮಹೋತ್ಸವ, ಸಾಯಂಕಾಲ 4ಕ್ಕೆ ಬಟ್ಲುಕಾಣಿಕೆ, ರಆಜಾಂಗಣ ಪ್ರಸಾದ ನಡೆಯಲಿರುವುದು.