ಉಪ್ಪಳ: ಬದುಕಿನಲ್ಲಿ ಸಿಗುವ ಅವಕಾಶವನ್ನು ಬಳಸಿಕೊಂಡು ದೇವರನ್ನು ಒಲಿಸಿಕೊಳ್ಳಬೇಕು. ಹೃದಯದ ರಾಗ ದ್ವೇಷ ನಾಶವಾಗುವುದೆಂದರೆ ದೇವರ ಹತ್ತಿರವಾಗುವುದೆಂದರ್ಥ. ಕಠಿಣ ಪರಿಶ್ರಮದಿಂದ ಉದಾತ್ತ ಚಿಂತನೆಯನ್ನು ಸಾಕಾರಗೊಳಿಸಬಹುದು. ತ್ಯಾಗದಿಂದ ಮಾತ್ರ ಭಗವಂತನ ಭಕ್ತಿ ಬೆಳಗಿದಂತೆ ಬದುಕು ಬೆಳಗುತ್ತದೆ ಎಂದು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಭೋಜನ ಶಾಲೆ ಲೋಕಾರ್ಪಣೆ ಹಾಗು 30 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗು 48 ಗಂಟೆಗಳ ಅಖಂಡ ಭಜನೋತ್ಸವದ ಮಂಗಳೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವಿತ್ತರು.
ಸಭೆಯಲ್ಲಿ ವೇದಮೂರ್ತಿ ಬಾಲಕೃಷ್ಣ ಭಟ್ ದಡ್ಡಂಗಡಿ ಉಪಸ್ಥಿತರಿದ್ದರು. ಡಾ.ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆ ವಹಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಬಂಟರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಟ್ಟಂ, ಪ್ರೇಮಾ ಕೆ.ಭಟ್, ಪಿ.ಆರ್.ಶೆಟ್ಟಿ ಪೆÇಯ್ಯೇಲ್, ತಲಪಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪುಷ್ಪಲತಾ, ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವತ್ ಪೂಜಾರಿ ಪೈವಳಿಕೆ, ಮಂದಿರದ ಅಧ್ಯಕ್ಷ ಮುತ್ತು ಶೆಟ್ಟಿ ಬಾಳ್ಯೂರು, ಗುರುಸ್ವಾಮಿ ರಾಧಾಕೃಷ್ಣ ರೈ ಹೊಸಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಲೀಲಾವತಿ ಪಕೀರ ಶೆಟ್ಟಿ ಕನ್ಯಾನ ಅವರನ್ನು ಗೌರವಿಸಲಾಯಿತು. ಮಂದಿರದ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಮಕೃಷ್ಣ ಸಂತಡ್ಕ ವಂದಿಸಿದರು. ಬೃಜೇಶ್ ಮತ್ತು ಬಳಗ ಪ್ರಾರ್ಥನೆ ಮಾಡಿದರು. ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸೀತಾ ಪರಿತ್ಯಾಗ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ಜರಗಿತು.