ಕಾನ್ಪುರ: ಮೆಟ್ಟಿಲು ಹತ್ತುವಾಗ ಪ್ರಧಾನಿ ನರೇಂದ್ರ ಮೋದಿ ಎಡವಿ ಬಿದ್ದಿರುವ ಘಟನೆ ನಿನ್ನೆ ನಡೆದಿದೆ. ಮೋದಿ ಮುಗ್ಗರಿಸಿ ಬಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕಾನ್ಪುರಕ್ಕೆ ತೆರಳಿದ್ದ ಮೋದಿ 'ನಮಾಮಿ ಗಂಗಾ' ಯೋಜನೆಯ ಪರಿಶೀಲಿಸಲೆಂದು ಗಂಗಾ ಘಾಟ್ ಗೆ ಭೇಟಿ ನೀಡಿದ್ದರು. ಈ ವೇಳೆ ಮೆಟ್ಟಿಲು ಹತ್ತುವಾಗ ಎಡವಿ ನೆಲಕ್ಕೆ ಬಿದ್ದರು. ಸ್ವಲ್ಪ ಬಿರ-ಬಿರನೇ ಹೆಜ್ಜೆ ಹಾಕುತ್ತಿದ್ದ ಮೋದಿ ಅವರಿಗೆ ಎಚ್ಚರಿಕೆಯಿಂದ ನಡೆಯುವಂತೆ ಭದ್ರತಾ ಸಿಬ್ಬಂದಿ ಹೇಳಿದರು. ಆದರೂ ಲೆಕ್ಕಿಸದೇ ವೇಗವಾಗಿ ಮೆಟ್ಟಿಲೇರುತ್ತಿದ್ದ ಮೋದಿ, ಕಾಲು ಎಡವಿ ಬಿದ್ದು ಬಿಟ್ಟರು.
ಮೋದಿ ಅವರು ಬಿದ್ದ ಕೂಡಲೇ ಹತ್ತಿರವೇ ಇದ್ದ ಭದ್ರತಾ ಸಿಬ್ಬಂದಿ ಶರವೇಗದಲ್ಲಿ ಧಾವಿಸಿಬಂದು ಮೋದಿ ಅವರನ್ನು ಎತ್ತಿ ನಿಲ್ಲಿಸಿದರು. ವಿಚಲಿತರಾಗದೆ ಮೋದಿ ಅವರು ಮಾಮೂಲಿನಂತೆ ಮುಂದೆ ಸಾಗಿದರು.
ಮೋದಿಗೆ ವಯಸ್ಸಾಯಿತೆ?' ಚರ್ಚೆ ಆರಂಭ:
ಗಂಗೆಗೆ ಹೀಗೂ ನಮಿಸಬಹುದೇ? ಎಂದು ಒಬ್ಬರು ಪ್ರಶ್ನೆ ಮಾಡಿದ್ದರೆ, ಮೋದಿ ಅವರಿಗೆ ವಯಸ್ಸಾಯಿತು ಎಂದು ಮತ್ತೊಬ್ಬರು ಮೂದಲಿಸಿದ್ದಾರೆ. ಸದಾ ಎಚ್ಚರದಿಂದಿರುವ ಮೋದಿ ಎಡವಿದ್ದು ಹೇಗೆ? ಯೋಗ, ಆಹಾರ ಪಥ್ಯ ಎಲ್ಲದರಲ್ಲೂ ನಿಗಾ ವಹಿಸುವ ಮೋದಿ ಅವರು ಸದಾ ಎಚ್ಚರದಿಂದ ಇರುತ್ತಾರೆ. ಈ ರೀತಿಯ ಸಣ್ಣ-ಪುಟ್ಟ ಎಚ್ಚರಿಕೆ ತಪ್ಪುವಿಕೆ ಅವರಿಂದ ಆಗುವುದು ಬಹಳಾ ವಿರಳ. ಆದರೆ ಅವರು ಇಂದು ಎಡವಿದ್ದಾರೆ. ಯಾವುದೇ ಗಾಯಗಳು ಮೋದಿ ಅವರಿಗೆ ಆಗಿಲ್ಲ.