ತ್ರಿಪುರಾ: ಬಾಂಗ್ಲಾದೇಶಿ ವಲಸಿಗರು ಭಾರತದೊಳಗೆ ನುಗ್ಗುತ್ತಿರುವ ವಿಡಿಯೋವನ್ನು ತ್ರಿಪುರಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ, ಅಲ್ಲಿನ ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಹೆಲೋ ಇಂಡಿಯಾ, ನಮ್ಮ ಗಡಿಗಳು ಹೀಗಿವೆ. ಈ ಬಾಂಗ್ಲಾದೇಶಿಗಳು ಒಳ ನುಗ್ಗುತ್ತಿದ್ದಾರೆ. ಲೊಕೇಶನ್ ತ್ರಿಪುರಾ, ಸಿಮ್ನಾ, ಇಂಡಿಯಾ ಡಲ್ಡಾಲಿ ಗ್ರಾಮ. ಐಎಲ್ ಪಿ ಅವರನ್ನು ತಡೆಗಟ್ಟುತ್ತದೆ ಎಂದು ನಿಮಗನ್ನಿಸುತ್ತದೆಯೇ? ಎಂದು ದೆಬ್ಬರ್ಮ ಪ್ರಶ್ನಿಸಿದ್ದಾರೆ.
Hello India,this is how porous our borders are.These Bangladeshi's are crossing over. Location Tripura,Simna, India at Daldali village. Do you think your ILP will stop them?
26th Dec:5 p.m.
26th Dec:5 p.m.
ಭತ್ತದ ಗದ್ದೆಯ ಮೂಲಕ ಬಾಂಗ್ಲಾ ಅಕ್ರಮ ವಲಸಿಗರು ತ್ರಿಪುರಾ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ದೆಬ್ಬರ್ಮ ಹೇಳುವ ಪ್ರಕಾರ ಈ ಅಕ್ರಮ ವಲಸಿಗರ ಒಳನುಸುಳುವಿಕೆ ಡಿ.26 ರಂದು ನಡೆದಿದೆ. ಅವರ ಭಾಷೆ ಅವರ ಉಡುಪುಗಳು ಅವರು ನಿರ್ದಿಷ್ಟ ಧರ್ಮಕ್ಕೆ ಸೆರಿದವರಾಗಿದ್ದಾರಾ ಎಂಬ ವ್ಯತ್ಯಾಸವನ್ನು ಗುರುತಿಸುವುದಕ್ಕೆ ಸಾಧ್ಯವಿಲ್ಲದಂತಿದೆ. ತ್ರಿಪುರಾದ ರಾಜವಂಶಸ್ಥರೂ, ಕಾಂಗ್ರೆಸ್ ನ ಮಾಜಿ ರಾಜ್ಯಾಧ್ಯಕ್ಷರೂ ಆಗಿರುವ ದೆಬ್ಬರ್ಮ ಸಿಎಎ ವಿರುದ್ಧ ಧ್ವನಿ ಎತ್ತಿದ್ದರು.