ಕುಂಬಳೆ: ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ಕಾಸರಗೋಡು ಜಿಲ್ಲಾ ಸಮ್ಮೇಳನ ಇಂದು ಕಾಸರಗೋಡು ನಗರಸಭಾ ವನಿತಾ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9ಕ್ಕೆ ಜಿಲ್ಲಾಧ್ಯಕ್ಷ ಟಿ.ಪಿ.ರಾಘವನ್ ಅವರಿಂದ ಧ್ವಜಾರೋಹಣ, 9.30ರಿಂದ ಸದಸ್ಯರ ಸಮಾವೇಶವು ಜಿಲ್ಲಾಧ್ಯಕ್ಷ ಟಿ.ಪಿ.ರಾಘವನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೆಜೆಯು ರಾಜ್ಯ ಕಾರ್ಯದರ್ಶಿ ಜಿ.ಪ್ರಭಾಕರನ್ ಉದ್ಘಾಟಿಸುವರು. ರಾಜ್ಯ ಅಧ್ಯಕ್ಷ ಬಾಬು ಥೋಮಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
11ರಿಂದ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ನೀರ್ಚಾಲು ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಉದ್ಯಮಿಗಳಾದ ಅಬು ತಮಾಂ ಉಪ್ಪಳ, ಕೆ.ಮೊಹಮ್ಮದ್ ಹನೀಫ್, ಕೆ.ವಿ.ಅಬುಯಾಸರ್ ಕಾಸರಗೋಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸದಸ್ಯರ ಗುರುತುಪತ್ರ ವಿತರಣೆಯನ್ನು ಕೆಜೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಬಿಶ್ವಾಸ್ ನಿರ್ವಹಿಸುವರು. ಕೆಜೆಯು ರಾಜ್ಯ ಜೊತೆ ಕಾರ್ಯದರ್ಶಿ ಕೆ.ಸಿ.ಸಿಮಿಜನ್ ಅವರು ದಿಕ್ಸೂಚಿ ಭಾಷಣ ಮಾಡುವರು. ರಾಜ್ಯ ಸಮಿತಿ ನೇತಾರರಾದ ಸನಲ್ ಅಟ್ಟೂರ್, ಪ್ರಕಾಶನ್ ಪಯ್ಯನ್ನೂರ್, ಸಿ.ಕೆ.ನಾಸರ್ ಕಾಞÂಂಗಾಡ್, ಶ್ರೀನಿ ಆಲಕ್ಕೋಡ್ ಕಣ್ಣೂರ್ ಉಪಸ್ಥಿತರಿದ್ದು ಶುಭಹಾರೈಸುವರು. ಬಳಿಕ ಕೆಜೆಯು ಜಿಲ್ಲಾ ಘಟಕದ ಕಾರ್ಯವೈಖರಿಗಳ ಅವಲೋಕನ, ಚರ್ಚೆಗಳು, ರಾಜ್ಯ ಸಮ್ಮೇಳನದ ಭಾಗವಾಗಿ ಮಾಹಿತಿ ಮತ್ತು ನೂತನ ಜಿಲ್ಲಾ ಸಮಿತಿಯ ರೂಪೀಕರಣ ನಡೆಯಲಿದೆ.