ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ 20ನೇ ವರ್ಷಾಚರಣೆಯ ಅಂಗವಾಗಿ ಪ್ರಶಾಂತಿ ವಿಂಶತಿ ಸಂಭ್ರಮವು ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಪೂರ್ಣವಾಗಿ ನೆರವೇರಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7.ರಿಂದ ವಿದ್ವಾನ್ ಬೋಳಂತಕೋಡಿ ರಾಮ್ ಭಟ್‍ರವರ ನೇತೃತ್ವದಲ್ಲಿ 1008 ತೆಂಗಿನಕಾಯಿ ಮಹಾಗಣಪತಿ ಹವನವು ಅಷ್ಟಾವಧಾನ ಸೇವೆಯೊಂದಿಗೆ ಪೂರ್ಣಾಹುತಿಗೊಂಡಿತು.
ಅಪರಾಹ್ನ 1.30ರಿಂದ ಸ್ವರಮಾಣಿಕ್ಯ ತಂಡ ಬಾಯಾರು ಇವರಿಂದ ಭಕ್ತಿರಸಮಂಜರಿ ಕಾರ್ಯಕ್ರಮವು ನಡೆಯಿತು. 3.ರಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಅಳಿಕೆಯ ಶ್ರೀಸತ್ಯಸಾಯಿ ಲೋಕಸೇವಾ ಸಂಸ್ಥೆಗಳ ಅಧ್ಯಕ್ಷ ಉಳುವಾನ ಗಂಗಾಧರ ಭಟ್ ಇವರನ್ನು ಪ್ರಶಾಂತಿ ಸೇವಾ ಟ್ರಸ್ಟ್ ಬಾಯಾರು ಮತ್ತು ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇವರ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ಮತ್ತು ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಗಂಗಾಧರ ಎಂಬ ಅಭಿನಂದನಾ ಗ್ರಂಥವನ್ನು ಪ್ರಶಾಂತಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಐ.ವಿ.ಭಟ್ ಬಿಡುಗಡೆಗೊಳಿಸಿದರು. ವಿವಿಧ ವಿಭಾಗಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹೆತ್ತವರೊಂದಿಗೆ ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಶ್ರೀಸತ್ಯಸಾಯಿ ಸೇವಾಸಂಸ್ಥೆಗಳು ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷ ಎಂ.ಪದ್ಮನಾಭ ಪೈ, ಸತ್ಯಸಾಯಿ ಸೇವಾಸಂಸ್ಥೆಗಳು ಕರ್ನಾಟಕ ಇದರ ರಾಜ್ಯ ಮಹಿಳಾ ಸಂಯೋಜಕಿ ಪ್ರಿಯಾ.ಪಿ.ಪೈ, ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಕೃಷ್ಣಶರ್ಮ, ಪೆಲತ್ತಜೆ ಸುಬ್ರಹ್ಮಣ್ಯಭಟ್, ಸತ್ಯಸಾಯಿ ಸೇವಾಸಂಸ್ಥೆಗಳು ಕಾಸರಗೋಡು ಇದರ ಜಿಲ್ಲಾ ಉಪಾಧ್ಯಕ್ಷ ಸಿ.ರಾಮಚಂದ್ರ ಉಪ್ಪಳ, ಪ್ರಶಾಂತಿ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್, ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್, ಟ್ರಸ್ಟ್‍ನ ಸದಸ್ಯರಾದ ಪಯ್ಯರಕೋಡಿ ಸದಾಶಿವ ಭಟ್, ಬಾಲಕೃಷ್ಣ ಶೆಟ್ಟಿ ಕುಡಾಲು, ಉಳುವಾನ ಶ್ರೀಕೃಷ್ಣ ಭಟ್, ಎಂ.ರಾಮಚಂದ್ರ ಭಟ್, ಡಾ. ಕೃಷ್ಣಮೂರ್ತಿ ಅಮೈ, ಸತ್ಯಸಾಯಿ ಸೇವಾ ಸಮಿತಿ ಬಾಯಾರು ಇದರ ಸಂಚಾಲಕ ಕಟ್ಟದಮನೆ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಆಡಳಿತ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್ ಸ್ವಾಗತಿಸಿ, ಶಾಲಾ ಪ್ರಾಂಶುಪಾಲ ಅನೂಪ್.ಕೆ ವಂದಿಸಿದರು. ಟ್ರಸ್ಟಿ ವಿ.ಬಿ.ಹಿರಣ್ಯ ಮತ್ತು ಅಧ್ಯಾಪಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.