ಮುಳ್ಳೇರಿಯ: ಬೆಳೇರಿ ಮೇಗಿನಮನೆ ತರವಾಡು ಕ್ಷೇತ್ರದ ಬ್ರಹ್ಮಕಲಶ ಹಾಗೂ ದೈವಗಳ ನೇತೃತ್ವದ ಕಾರ್ಯಕ್ರಮದ ಸಭೆಯು ಇತ್ತೀಚೆಗೆ ತರವಾಡು ಮನೆಯಲ್ಲಿ ನಡೆಯಿತು.
ಸಭೆಯಲ್ಲಿ ಪದ್ಮನಾಭ ಮಣಿಯಾಣಿ ಬೆಳೇರಿ ಮೇಗಿನ ಮನೆ ಅಧ್ಯಕ್ಷತೆ ವಹಿಸಿದ್ದರು. ದಾಮೋದರ ಮಣಿಯಾಣಿ ನಾಕೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಂಕರನಾರಾಯಣ ಭಟ್ ಹಾಗೂ ಮನೋಹರ ರೈ ಪಿಂಡಗ ಉಪಸ್ಥಿತರಿದ್ದರು. ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಸಮರ್ಥ ನಿರ್ವಹಣೆಗೆ ಸಮಿತಿ ರಚಿಸಲಾಯಿತು. ಕುಂಟಾರು ವಾಸುದೇವ ತಂತ್ರಿ(ಗೌರವಾಧ್ಯಕ್ಷರು), ನೆಟ್ಟಣಿಗೆ ಶ್ರೀಮಹತೋಭಾರ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ದಾಮೋದರ ಮಣಿಯಾಣಿ(ಅಧ್ಯಕ್ಷ), ಬಿ.ಎ.ಬೆಳೇರಿ(ಕಾರ್ಯದರ್ಶಿ), ಮೋಹನಕೃಷ್ಣ ಕೈಪಂಗಳ(ಖಜಾಂಜಿ) ಹಾಗೂ ಹತ್ತು ಮಂದಿ ಸದಸ್ಯರ ಸಮಿತಿಯನ್ನು ಆರಿಸಲಾಯಿತು. ಜೊತೆಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು. ಬ್ರಹ್ಮಕಲಶೋತ್ಸವವು ಪೆಬ್ರವರಿ 6 ಹಾಗೂ 7 ರಂದು ಮತ್ತು ದೈವಗಳ ಉತ್ಸವವು ಪೆ.7 ರಂದು ರಾತ್ರಿ ಹಾಗೂ 8 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.