HEALTH TIPS

ಭಾರತವನ್ನು ವೈದಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸಲು ರಾಷ್ಟ್ರಪತಿ ಕರೆ

 
     ಜೋಧ್ ಪುರ: ಭಾರತವನ್ನು ವೈದ್ಯಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸುವುದನ್ನು ಮತ್ತು ಕಡಿಮೆ ವೆಚ್ಚದ ರೋಗ ಪತ್ತೆ, ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದ್ದಾರೆ.
   ಇಲ್ಲಿನ ಏಮ್ಸ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಎರಡನೇ ಘಟಿಕೋತ್ಸವದಲ್ಲಿ ನಿನ್ನೆ ಮಾತನಾಡಿದ ಅವರು, ಭಾರತ, ಸ್ವಂತವಾಗಿ ಉಪಕರಣಗಳನ್ನು ತಯಾರಿಸುವುದು ತುಂಬಾ ಮುಖ್ಯವಾಗಿದೆ. ಇದರಿಂದ ಕಡಿಮೆ ದರದಲ್ಲಿ ಆರೋಗ್ಯ ರಕ್ಷಣೆ ಸೇವೆಗಳು ಒದಗುವುದಲ್ಲದೆ, ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಭಾರತ ವೈದ್ಯಕೀಯ ತಂತ್ರಜ್ಞಾನ ಕೇಂದ್ರವಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು. 
    ವೈದ್ಯಕೀಯ ವಿದ್ಯಾರ್ಥಿಗಳು ಕನಿಕರ ಮನಸ್ಸು ಬೆಳೆಸಿಕೊಳ್ಳಬೇಕು. ಜನರ ಜೀವ ಉಳಿಸಲು ಮತ್ತು ಜನರ ಆರೋಗ್ಯ ಸುಧಾರಿಸಲು ತಮ್ಮ ಕೌಶಲ ಮತ್ತು ಜ್ಞಾನವನ್ನು ಬಳಸಿಕೊಳ್ಳಬೇಕು. ಇಡೀ ವೈದ್ಯ ವೃತ್ತಿ ಜೀವನದಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಳ್ಳಬೇಕು. ತಮ್ಮ ಸುತ್ತಲಿನ ಸಮಾಜ ಎಂದಿಗೂ ಮರೆಯಲಾಗದಂತೆ ಎಲ್ಲ ವೈದ್ಯರು ಮತ್ತು ನಸಿರ್ಂಗ್ ಪದವೀಧರರು ಸೇವೆಯನ್ನು ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries