ಉಪ್ಪಳ: ಸಮಗ್ರ ಶಿಕ್ಷ ಕೇರಳ ಬಿ.ಆರ್.ಸಿ ಮಂಜೇಶ್ವರ ಇದರ ಆಶ್ರಯದಲ್ಲಿ ವಿಶ್ವ ವಿಶೇಷ ಚೇತನ ದಿನಾಚರಣೆಯನ್ನು ಜಿ.ಎಲ್.ಪಿ.ಎಸ್ ಮುಳಿಂಜ ದಲ್ಲಿ ನಡೆಯಿತು.
ಮಂಗಲ್ಪಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರು ಶಾಹುಲ್ ಹಮೀದ್ ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಶಾಸಕರಾದ ಎಂ.ಸಿ ಕಮರುದ್ದೀನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಲಾ.ಪಂ.ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಿಲ್ಲಾ ಪಂಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫರೀದ ಝಾಕೀರ್ ಉಪಸ್ಥಿತರಿದ್ದು ಮಾತನಾಡಿದರು. ಜಮಿಲ ಸಿದ್ದೀಕ್, ಆಯಿಷತ್ ಫಾರಿಸಾ, ಸುಜಾತ ಬಿ ಶೆಟ್ಟಿ, ದಿನೇಶ ವಿ, ನಾರಾಯಣ ದೇಲಂಪಾಡಿ, ದಿನೇಶ್ ಡಿ ಶುಭಾಶಂಸನೆಗೈದರು.ಬಿಆರ್‍ಸಿ ನಿರೂಪಣಾಧಿಕಾರಿ ಗುರುಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ಅಬ್ದುಲ್ ಕರೀಂ ಪಿ.ಕೆ ಸ್ವಾಗತಿಸಿ, ಪುಷ್ಪಲತಾ ವಂದಿಸಿದರು. ಮೋಹಿನಿ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.