ನವದೆಹಲಿ: ಆಧಾರ್ ಸಂಖ್ಯೆ ಜೊತೆ ಪ್ಯಾನ್ ಕಾರ್ಡ್ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಣೆ ಮಾಡಿದ್ದು, ಈಗ ಗಡುವನ್ನು ಡಿಸೆಂಬರ್ 31ರಿಂದ ಮಾರ್ಚ್ ತಿಂಗಳಿಗೆ ವಿಸ್ತರಣೆ ಮಾಡಿದೆ.
ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ಡಿಸೆಂಬರ್ 31ರೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಸೂಚಿಸಲಾಗಿತ್ತು. ಇದೀಗ ಈ ಗಡುವನ್ನು ಡಿಸೆಂಬರ್ 31ರಿಂದ ಮಾರ್ಚ್ ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಇಂದು ನಡೆದ ಹಣಕಾಸು ಸಚಿವಾವಲಯದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವ ತನಕ ತೆರಿಗೆ, ಬ್ಯಾಂಕಿಂಗ್, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ. ಈ ಮೊದಲು ಪ್ಯಾನ್-ಆಧಾರ್ ಜೋಡಣೆಗೆ 2019ರ ಡಿಸೆಂಬರ್ 31 ಕಡೆಯ ದಿನವಾಗಿತ್ತು.