ಕುಂಬಳೆ: ಕುಂಬಳೆಯ ಸಕಾ9ರೀ ಹಯರ್ ಸೆಕೆಂಡರಿ ಶಾಲೆಯಲ್ಲಿ 28 ವರ್ಷಗಳ ಕಾಲ ನಿರಂತರವಾಗಿ ಕನ್ನಡ ಭಾಷಾ ಶಿಕ್ಷಕಿಯಾಗಿ ಸೇವೆಗೈದವರು ಎರಡು ದಿನಗಳ ಹಿ0ದೆ ಅನಾರೋಗ್ಯದಿಂದ ಮೃತರಾಗಿದ್ದು, ಆ ಬಳಿಕ ಸೋಮವಾರ ಶಾಲಾರಂಭಗೊ0ಡಿದ್ದು, ನಿಧನದ ಸ0ತಾಪ ಸೂಚಕವಾಗಿ ರಜೆ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕು0ಬಳೆ ಶಾಲೆಯ ಸಾವಿತ್ರಿ ಹೆಗ್ಗಡೆ ,ಉಪ್ಪಂಗಳ ಅವರು ಶುಕ್ರವಾರ ನಿಧನರಾಗಿದ್ದರು. ಮುಂದಿನ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಬೇಕಾಗಿದ್ದ ಇವರು ಅಸೌಖ್ಯದ ನಿಮಿತ್ತ ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.
ಅವರ ನಿಧನದ ನಿಮಿತ್ತ ಕುಂಬ್ಳೆ ಸರಕಾರೀ ಹಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಸಹೋದ್ಯೋಗಿಗಳು ಸಭೆ ಸೇರಿ *ಸಂತಾಪವನ್ನು* ವ್ಯಕ್ತಪಡಿಸಿ ಶಾಲೆಗೆ ಒಂದು ದಿನದ ರಜೆ ಸಾರಬೇಕಾಗಿತ್ತು. ಆದರೆ ಸದ್ರಿ ಶಾಲೆಯಲ್ಲಿ ಅಂತಹ ಒಂದು ಗೌರವ ದಿವಂಗತರಿಗೆ ಸಲ್ಲದಿರುವುದು ಕನ್ನಡ ಶಿಕ್ಷಕಿಗೆ ಮಾಡಿರುವ ಅವಮಾನವೆ0ಬ ಮಾತುಗಳು ಕೇಳಿ ಬ0ದಿದೆ.