HEALTH TIPS

ಬದಿಯಡ್ಕದಲ್ಲಿ ಅಯ್ಯಪ್ಪ ದೀಪೋತ್ಸವ ಸಂಪನ್ನ

       
       ಬದಿಯಡ್ಕ: ಕಲಿಯುಗವರದನಾದ ಶ್ರೀಧರ್ಮಶಾಸ್ತನನ್ನು ಕಣ್ತುಂಬಿಕೊಳ್ಳಬೇಕಾದರೆ 48ದಿನಗಳ ಕಠಿಣ ವ್ರತಾನುಷ್ಠಾನರಾಗಿ ಪುಣ್ಯವಂತರಾಗಬೇಕು. ಅಯ್ಯಪ್ಪ ಭಕ್ತರೆಲ್ಲರೂ ನಮ್ಮ ಜೀವನಕ್ಕೆ ತದ್ವಿರುದ್ಧವಾದ ಅಂಶಗಳನ್ನು ತ್ಯಜಿಸಿ ಮುಂದೆಯೂ ಸದಾ ಸತ್ಕರ್ಮಗಳಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಬೇಕಾಗಿದೆ ಎಂದು ವಸಂತ ಪೈ ಬದಿಯಡ್ಕ ತಿಳಿಸಿದರು.
     ಬದಿಯಡ್ಕ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ 36ನೇ ವರ್ಷದ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
     ಸೇವಾ ಸಮಿತಿಯ ಗೌರವಾಧ್ಯಕ್ಷ ಚಂದ್ರಹಾಸ ರೈ ಪೆರಡಾಲಗುತ್ತು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪೆರುಮುಂಡ ಶಂಕರನಾರಾಯಣ ಭಟ್, ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಶುಭಾಶಂಸನೆಗೈದರು. ಶ್ರೀಮಂದಿರದ ಪ್ರಧಾನ ಗುರುಸ್ವಾಮಿ ಭಾಸ್ಕರ, ಕೃಷ್ಣ ಗುರುಸ್ವಾಮಿ, ಪುಷ್ಪರಾಜ ಗುರುಸ್ವಾಮಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗೋಕುಲ್ ಬದಿಯಡ್ಕ ಸ್ವಾಗತಿಸಿ, ಜತೆಕಾರ್ಯದರ್ಶಿ ಚರಣ್ ಎಂ. ವಂದಿಸಿದರು. ಸೇವಾಸಮಿತಿಯ ಅಧ್ಯಕ್ಷ ನರೇಂದ್ರ ಬದಿಯಡ್ಕ ನಿರೂಪಿಸಿದರು. ಸದಸ್ಯ ನಿರಂಜನ ರೈ ಪೆರಡಾಲ ಸಹಕರಿಸಿದರು. ಬೆಳಗ್ಗೆ ಶ್ರೀ ಮಹಾಗಣಪತಿ ಹವನ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಶರಣಂವಿಳಿ, ಮಹಾಪೂಜೆ ಪ್ರಸಾದ ವಿತರಣೆ ಅನ್ನದಾನ, ಅಪರಾಹ್ನ ಯಕ್ಷಗಾನ ತಾಳಮದ್ದಳೆ, ಸಂಜೆ ವಿದುಷಿ ವಿದ್ಯಾಲಕ್ಷ್ಮೀ ನಾಟ್ಯ ವಿದ್ಯಾಲಯ ಕುಂಬಳೆ ಇವರ ಬದಿಯಡ್ಕ ಶಾಖೆಯ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ, ರಾತ್ರಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ರುಕ್ಮಿಣಿ ಸ್ವಯಂವರ, ಗಜೇಂದ್ರ ಮೋಕ್ಷ ಪ್ರದರ್ಶಿಸಲ್ಪಟ್ಟಿತು.
               ಪಾಲಕೊಂಬು ಮೆರವಣಿಗೆಯಲ್ಲಿ ಗಮನಸೆಳೆದ ದಶರಥನಂದನ ರಾಮ್... ರಾಮ್.... :
       ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಿಂದ ಸಂಜೆ ಪಾಲಕೊಂಬು ಮೆರವಣಿಗೆ ಆರಂಭಗೊಂಡಿತು. ಚೆಂಡೆಮೇಳ, ವಾದ್ಯಘೋಷದೊಂದಿಗೆ ಬಾಲಗೋಕುಲದ ಮಕ್ಕಳ ನೃತ್ಯ ಗಮನಸೆಳೆಯಿತು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ದಶರಥ ನಂದನ ರಾಮ್ ರಾಮ್ ಹಾಡಿಗೆ ಮಕ್ಕಳು ನರ್ತಿಸಿದ್ದರು. ಎಲ್ಲಾ ಮೆರವಣಿಗೆಯಲ್ಲೂ ಕಂಡುಬರುತ್ತಿರುವ ಡೀಜೆ ಹಾಡಿನ ನೃತ್ಯಕ್ಕಿಂತ ಭಿನ್ನವಾದ ಈ ನೃತ್ಯವು ಮೆರವಣಿಗೆಗೆ ಶೋಭೆಯನ್ನು ತಂದಿತ್ತು. ಬದಿಯಡ್ಕ ಪೇಟೆಯಲ್ಲಿ ಸಾಗಿ ಮೆರವಣಿಗೆ ಉತ್ಸವಾಂಗಣಕ್ಕೆ ತಲುಪಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಿನ ಜಾವ ತಿರುವಿಳಕ್, ಅಯ್ಯಪ್ಪನ್ ಪಾಟ್, ಪೊಲಿಪಾಟ್, ತಾಲಪ್ಪೊಲಿ, ಅಗ್ನಿಪೂಜೆ, ಅಯ್ಯಪ್ಪ-ವಾವರ ಯುದ್ಧ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries