ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಉತ್ಸವವು ಪ್ರಥಮದಿನ ಅಭಿಷೇಖ ಗಣಹೋಮ ನವಕಾಭಿಷೇಕದೊಂದಿಗೆ ಪ್ರಾರಂಭವಾಯಿತು. ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಸಂಪನ್ನವಾಯಿತು. ಅರವತ್ ಶ್ರೀ ಪದ್ಮನಾಭ ತಂತ್ರಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರಗಿದವು. ಬಳಿಕ ಭಕ್ತರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ಸಾಂಗವಾಗಿ ನೆರವೇರಿದವು.
ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಉಪಾಸನೆಯು ಉತ್ಸವಕ್ಕೆ ಮೆರುಗನ್ನುಂಟುಮಾಡಿತು. ರಾತ್ರಿ ಶ್ರೀ ಭೂತಬಲಿ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರಿಗಿ ಬಂದ ಬಳಿಕ ಕಟ್ಟೆಪೂಜೆ, ರಾಜಾಂಗಣದಲ್ಲಿ ನೃತ್ಯಸೇವೆ ಜರಗಿದವು. ಉತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ ಸೇವೆಯು ಜರಗಿತು.
ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವವಹಿಸಿದರು. ಶ್ರೀ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಿಸಿದರು.