HEALTH TIPS

ಪೆರ್ಮುದೆ : ಕ್ರಿಸ್ಮಸ್ ಕ್ಯಾರಲ್ಸ್ ಕ್ರಿಸ್ಮಸ್ ಹಬ್ಬವನ್ನು ಸ್ವಾಗತಿಸಲು ನಾಡು ಸಜ್ಜು


     ಕುಂಬಳೆ: ಜಗದೋದ್ಧಾರಕ ಪ್ರಭುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬಕ್ಕೆ ನಾಡಿನಾದ್ಯಂತ ವೈಭವವದ ಸಿದ್ಧತೆ ನಡೆಯುತ್ತಿದೆ. ವಿವಿಧೆಡೆ ವಿದ್ಯುತ್ ದೀಪಗಳ ಅಲಂಕಾರ, ರಂಗುರಂಗಿನ ನಕ್ಷತ್ರಗಳ ಸೊಬಗು, ಬಾಲಯೇಸುವಿನ ಜನನ ಸಂದೇಶ ಸಾರುವ ಕ್ರಿಸ್ಮಸ್ ಗೋದಲಿಗಳು, ಕ್ರಿಸ್ಮಸ್ ಕ್ಯಾರಲ್ಸ್ ಗಾಯನ  ಸಡಗರ ಸೃಷ್ಟಿಸುತ್ತಿದೆ. 
       ಕ್ರಿಸ್ಮಸ್ ಸಂಭ್ರಮದಲ್ಲಿ ಕ್ರಿಸ್ಮಸ್ ತಾತಾನ ನೆನಪು ಪ್ರಮುಖವಾದುದಾಗಿದೆ. ಸಾಂತಾ ನಿಕೋಲಸ್ ಅವರು ಕ್ರಿಸ್ಮಸ್ ತಾತಾ ಎಂದು ಪರಿಚಿತರಾಗಿದ್ದಾರೆ. ಸಾಂತಾ ನಿಕೋಲಸ್ ಅವರು ಮನುಕುಲದ ರಕ್ಷಣೆಗಾಗಿ ಭೂಲೋಕದಲ್ಲಿ ಜನಿಸಿದ ಯೇಸುಕ್ರಿಸ್ತನ ಹುಟ್ಟಿನ ಸಂದೇಶವನ್ನು ಕ್ರಿಸ್ಮಸ್ ದಿನದಂದು ಮನೆಮನೆಗೆ ತೆರಳಿ ಸಾರುತ್ತಿದ್ದರು. ಬಡವರಿಗೆ ಕ್ರಿಸ್ಮಸ್ ಕಾಣಿಕೆಗಳನ್ನು, ಮಕ್ಕಳಿಗೆ ಸಿಹಿ ತಿಂಡಿಗಳನ್ನು ಹಂಚುತ್ತಿದ್ದ ಸಾಂತಾ ನಿಕೋಲಸ್‍ರನ್ನು ಇಂದಿಗೂ ಕ್ರಿಸ್ಮಸ್ ದಿನಗಳಂದು ನೆನಪಿಸಲಾಗುತ್ತಿದೆ. ಈ ಸಾಂತಾ ನಿಕೋಲಸ್ ಇಂದು ಎಲ್ಲರ ಅಚ್ಚುಮೆಚ್ಚಿನ ಕ್ರಿಸ್ಮಸ್ ತಾತಾ ಆಗಿದ್ದಾರೆ. ರಾತ್ರಿ ವೇಳೆಗಳಲ್ಲಿ ಮನೆ ಮನೆಗೆ ತೆರಳಿ ಬಡವರಿಗೆ, ಬಡಮಕ್ಕಳಿಗೆ ಕ್ರಿಸ್ಮಸ್ ಉಡುಗೊರೆಗಳನ್ನು, ಸಿಹಿ ತಿಂಡಿಗಳನ್ನು ಹಂಚುತ್ತಾ ಕ್ರಿಸ್ಮಸ್ ಸಂದೇಶ ಸಾರುತ್ತಿದ್ದ ಸಾಂತಾ ನಿಕೋಲಸ್ ಅವರ ಸ್ಮರಣೆಗೆ ಇಂದಿಗೂ ಕ್ರಿಸ್ಮಸ್ ತಾತಾನ ವೇಷ ಧರಿಸಿ ಕ್ರಿಸ್ಮಸ್ ಕ್ಯಾರಲ್ಸ್ ಗಾಯನದೊಂದಿಗೆ ಮನೆಮನೆಗೆ ತೆರಳುವ ಸಂಪ್ರದಾಯವಿದೆ.
ಇದರಂತೆ ಈ ವರ್ಷದ ಕ್ರಿಸ್ಮಸ್ ಕ್ಯಾರಲ್ಸ್ ಗಾಯನಗಳಿಗೆ ಎಲ್ಲೆಡೆ ಚಾಲನೆ ನೀಡಲಾಗಿದೆ.  ಬ್ಯಾಂಡ್‍ವಾದ್ಯಗಳೊಂದಿಗೆ ಕ್ಯಾರಲ್ಸ್ ಹಾಡುಗಳನ್ನು ಹಾಡುತ್ತಾ ಮನೆಮನೆಗೆ ಬರುವ ಕ್ರಿಸ್ಮಸ್ ತಾತಾನನ್ನು ಸ್ವಾಗತಿಸಲು ಕ್ರೈಸ್ತರ ಸಹಿತ ಎಲ್ಲ ಧರ್ಮದವರು ಕಾತುರರಾಗಿರುವುದು ನಾಡಿನ ಸೌಹಾರ್ದತೆಯ ಸಂಕೇತವಾಗಿದೆ.
     ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯ ವ್ಯಾಪ್ತಿಯಲ್ಲಿ ಐಸಿವೈಎಂ ಘಟಕದ ನೇತೃತ್ವದಲ್ಲಿ ಕ್ರಿಸ್ಮಸ್ ಕ್ಯಾರಲ್ಸ್ ನಡೆಯಿತು. ಧರ್ಮಗುರು ಫಾ.ಮೆಲ್ವಿನ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries